500 ರೂಪಾಯಿಗೆ ಮಾರಾಟವಾಗುತ್ತಿತ್ತು ಉಚಿತ ಲಸಿಕೆ….! ಪೊಲೀಸರ ಖೆಡ್ಡಾಕ್ಕೆ ಬಿದ್ದ ಸರ್ಕಾರಿ ವೈದ್ಯೆ..!!

ಬೆಂಗಳೂರು: ದೇಶದೆಲ್ಲೆಡೆ ಲಸಿಕೆಗಾಗಿ ಹಾಹಾಕಾರ ಎದ್ದಿದ್ದರೇ ಈ ಸರ್ಕಾರಿ ವೈದ್ಯೆ ಮಾತ್ರ ದಿನವೊಂದಕ್ಕೆ ಲಸಿಕೆ ವಿತರಿಸಿ 30 ಸಾವಿರಕ್ಕೂ ಅಧಿಕ ಮೊತ್ತದ ಹಣ ಸಂಪಾದಿಸುತ್ತಿದ್ದಳು. ಕೊನೆಗೂ ಪೊಲೀಸ ಕಾರ್ಯಾಚರಣೆಯಲ್ಲಿ ವೈದ್ಯೆಯ ಕರಾಮತ್ತು ಬಯಲಿಗೆ ಬಿದ್ದಿದ್ದು, ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ ಬೆಂಗಳೂರು ಪೊಲೀಸರು.

ಉಚಿತವಾಗಿ ಸರ್ಕಾರದಿಂದ ವಿತರಿಸಲಾಗುವ ಲಸಿಕೆಯನ್ನು ಸಂಗ್ರಹಿಸಿದ್ದ ಬೆಂಗಳೂರಿನ ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಪುಷ್ಪಿತಾ ಹಾಗೂ ನರ್ಸ್ ಪ್ರೇಮಾ  500 ರೂಪಾಯಿಗೆ ಲಸಿಕೆಯನ್ನು ಜನರಿಗೆ ವಿತರಿಸುತ್ತಿದ್ದರು.

https://kannada.newsnext.live/jeera-water-wight-loss-health-tips/

ಪ್ರೇಮಾ ಅವರ ಮನೆಯಲ್ಲೇ ಪ್ರತಿನಿತ್ಯ ಸಂಜೆ 4 ಗಂಟೆಯಿಂದ ಸಾರ್ವಜನಿಕರಿಗೆ 500 ರೂಪಾಯಿ ದರದಲ್ಲಿ ಲಸಿಕೆ ವಿತರಿಸಲಾಗುತ್ತಿತ್ತು. ಈ ಇಬ್ಬರು ಆರೋಪಿಗಳು ಪ್ರತಿನಿತ್ಯ ಅಂದಾಜು 30 ಸಾವಿರ ರೂಪಾಯಿ ಸಂಪಾದಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಅನ್ನಪೂರ್ಣ ನಗರ ಪೊಲೀಸರು ಇನ್ಸಪೆಕ್ಟರ್ ಲೋಹಿತ್ ನೇತೃತ್ವದಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ವೈದ್ಯೆಯನ್ನು ಬಂಧಿಸಿದ್ದಾರೆ.

https://kannada.newsnext.live/after-black-fungus-reports-of-white-fungus-infections-surface-what-we-know-so-far/

ಇವರು ನೀಡುತ್ತಿದ್ದ ಲಸಿಕೆ ಮಂಜುನಾಥನಗರ ಪ್ರಾಥಮಿಕ ಕೇಂದ್ರಕ್ಕೆ ಹಿರಿಯ ನಾಗರಿಕರಿಗಾಗಿ ವಿತರಿಸಲು ಸರ್ಕಾರದಿಂದ ಸರಬರಾಜು ಆಗಿದ್ದಾಗಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Comments are closed.