ಶೂಟಿಂಗ್ ಗೆ ಹೊರಟ ತುಂಬು ಗರ್ಭಿಣಿ….! ಅನುಷ್ಕಾ ಕಂಡು ಅಭಿಮಾನಿಗಳ ಸಂಭ್ರಮ…!!

ಕ್ರಿಕೆಟಿಗ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ತಮ್ಮ ಚೊಚ್ಚಲ‌ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಆದರೇ ಸಧ್ಯ ೮ ತಿಂಗಳ ಗರ್ಭಿಣಿ ಅನುಷ್ಕಾ ಮನೆಯಲ್ಲಿ ವಿಶ್ರಾಂತಿ ಪಡೆಯೋ ಬದಲು ಶೂಟಿಂಗ್ ಗೆ ಹೊರಟಿದ್ದಾರೆ.

೮ ತಿಂಗಳ ಗರ್ಭಿಣಿ ಅನುಷ್ಕಾ ಈ ಟೈಂ ನಲ್ಲಿ ಶೂಟಿಂಗ್ ಹೊರಟ್ರಾ ಅಂತ ನೀವು ಹುಬ್ಬೇರಿಸಬೇಡಿ. ಇಷ್ಟಕ್ಕೂ ಅನುಷ್ಕಾ ಶೂಟಿಂಗ್ ಗೆ ಹೋಗ್ತಿರೋದು ಸಿನಿಮಾ ಸೆಟ್ ಗಲ್ಲ. ಬದಲಾಗಿ ಜಾಹೀರಾತು ಶೂಟಿಂಗ್ ಗೆ.

ಇನ್ನೇನು ಹೊಸ ವರ್ಷದ ಆರಂಭದಲ್ಲಿ ಮಗುವಿನ ನೀರಿಕ್ಷೆ ಯಲ್ಲಿ ಇರೋ ಅನುಷ್ಕಾ ಬರೋಬ್ಬರಿ 7 ಜಾಹೀರಾತು ಒಪ್ಪಿಕೊಂಡಿದ್ದಾರಂತೆ. ಹೀಗಾಗಿ ಅವುಗಳ ಶೂಟಿಂಗ್ ಗಾಗಿ ಬರೋಬ್ಬರಿ ೮ ತಿಂಗಳ ಬಳಿಕ ಬಣ್ಣ ಹಚ್ಚಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಮುಗಿದ ಐಪಿಎಲ್ ಸರಣಿಗಳಿಗಾಗಿ ಅನುಷ್ಕಾ ವಿರಾಟ್ ಕೊಹ್ಲಿ ಜೊತೆ ದುಬೈಗೆ ತೆರಳಿದ್ದರು. ಅಲ್ಲಿಂದ ಮರಳುತ್ತಿದ್ದಂತೆ ತಾವು ಒಪ್ಪಿಕೊಂಡ ಕಮಿಟಮೆಂಟ್ ಗೆ ಮರಳಿದ್ದಾರೆ. ಸ್ವತಃ ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದು ಸಂಭ್ರಮ ವ್ಯಕ್ತಪಡಿಸಿದ್ದಾರೆ.

Comments are closed.