ಸರತಿ ಸಾಲಿನಲ್ಲಿ ಜೈಲಿಗೆ ಹೊರಟ ಕೈ ಮುಖಂಡರು…! ಡ್ಯಾಮೇಜ್ ಕಂಟ್ರೋಲ್ ಗೆ ಪರದಾಡ್ತಿದ್ದಾರೆ ಕಾಂಗ್ರೆಸ್ ನಾಯಕರು…!!

ಬೆಂಗಳೂರು: ಕೆಲದಿನಗಳಿಂದ ರಾಜ್ಯದಲ್ಲಿ ಏರುತ್ತಿರುವ ಕೊರೋನಾಗಿಂತ ಜಾಸ್ತಿ ಸುದ್ದಿಯಾಗ್ತಿರೋದು ಕಾಂಗ್ರೆಸ್ ನಾಯಕರ ಜೈಲು ಪರೇಡ್. ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು,ಮಾಜಿ ಸಚಿವರು ಸಾಲು-ಸಾಲಾಗಿ ಜೈಲು ಸೇರುತ್ತಿದ್ದು ಕೈ ನಾಯಕರು ಮುಜುಗರ ಎದುರಿಸಲಾಗದೇ ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಒಂದು ತಿಂಗಳಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ‌ಮೇಯರ್ ಸಂಪತ್‌ ರಾಜ್, ಮಾಜಿ ಸಚಿವ್ ರೋಷನ್ ಬೇಗ್ ಹೀಹೆ ಕಾಂಗ್ರೆಸ್ ನಲ್ಲಿ ಸದ್ದು ಮಾಡಿದ ಮಾಸ್ ಲೀಡರ್ ಗಳು ಸದ್ದಿಲ್ಲದೇ ಜೈಲು ಸೇರಿದ್ದಾರೆ.

ಕಳೆದ ಒಂದು ತಿಂಗಳಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ‌ಮೇಯರ್ ಸಂಪತ್‌ ರಾಜ್, ಮಾಜಿ ಸಚಿವ್ ರೋಷನ್ ಬೇಗ್ ಹೀಗೆ ಕಾಂಗ್ರೆಸ್ ನಲ್ಲಿ ಸದ್ದು ಮಾಡಿದ ಮಾಸ್ ಲೀಡರ್ ಗಳು ಸದ್ದಿಲ್ಲದೇ ಜೈಲು ಸೇರಿದ್ದಾರೆ.

ವರ್ಷಗಳ ಹಿಂದೆ ನಡೆದ ಜಿಪಂ ಸದಸ್ಯ ಯೋಗೇಶ್ ಗೌಡ್ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ ಪ್ರಭಾವಿ ಕೈ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲು ಸೇರಿದ್ದು, ಸಧ್ಯ ಜಾಮೀನು ಸಿಗದೇ ಜೈಲಿನಲ್ಲೇ ಕಂಬಿ ಎಣಿಸುತ್ತಿದ್ದಾರೆ.

ಇತ್ತ ಕೆಲತಿಂಗಳ ಹಿಂದೆ ನಡೆದ ಡಿಜೆಹಳ್ಳಿ ,ಕೆಜಿ ಹಳ್ಳಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಸಿಬಿ, ಮಾಜಿ ಬಿಬಿಎಂಪಿ ಮೇಯರ್ ಹಾಗೂ ಡಿಕೆಶಿ ಆಪ್ತ ಸಂಪತ್ ರಾಜ್ ನನ್ನು ಮುಲಾಜಿಲ್ಲದೇ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನ ಹಾದಿ ತೋರಿಸಿದೆ.ಒಂದು ಕಾಲದಲ್ಲಿ ನಗರದ ಪ್ರಥಮ‌ ಪ್ರಜೆ ಎನ್ನಿಸಿಕೊಂಡಿದ್ದ ಸಂಪತ್ ರಾಜ್ ಇದೀಗ ಗಲಾಟೆ ಹಿಂದಿನ ಮಾಸ್ಟರ್ ಮೈಂಡ್ ಎನ್ನಿಸಿಕೊಂಡು ಜೈಲಿನಲ್ಲಿ ದಿನದೂಡುತ್ತಿದ್ದಾರೆ.

ಇನ್ನು ಕೋಟ್ಯಾಂತರ ರೂಪಾಯಿ ಬಡವರ ಹಣ ತಿಂದು ಪರಾರಿಯಾದ ಐಎಂಎ ಮಾಲೀಕನ‌ ಜೊತೆ ಶಾಮೀಲಾದ ಕಾರಣಕ್ಕೆ ಮಾಜಿ ಸಚಿವ ರೋಷನ್ ಬೈಗ್ ಕೂಡ ಸಿಬಿಐ ಕುಣಿಕೆಗೆ ಸಿಲುಕಿದ್ದಾರೆ.

ಹೀಗೆ ನಾನಾ ಅಪರಾಧ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಜೈಲು ಸೇರುತ್ತಿರೋದನ್ನು ಕಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಹಿರಿಯ ಕಾಂಗ್ರೆಸ್ಸಿಗರು ಕಂಗಾಲಾಗಿದ್ದು, ಈ ವಿಚಾರಗಳಿಂದ ಪಕ್ಷದ ಮೇಲಾಗೋ ಋಣಾತ್ಮಕ ಪರಿಣಾಮದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ನಿಧಾನಕ್ಕೆ ಕಾಂಗ್ರೆಸ್ ಮೂಲೆಗುಂಪಾಗುತ್ತಿದ್ದು, ಮೊನ್ನೆ ನಡೆದ ಕರ್ನಾಟಕದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆಲ್ಲಲು ಹೀನಾಯವಾದ ವೈಫಲ್ಯವನ್ನು ಕಂಡಿದೆ.

ಜನರು ನಿಧಾನಕ್ಕೆ ಬಿಜೆಪಿಯತ್ತ ಒಲವು ಬೆಳೆಸಿಕೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕರು ಕೊಲೆ-ಮೋಸ-ವಂಚನೆಯಂತ ಗಂಭೀರ ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಿರೋದು ಪಕ್ಷದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇನ್ನೊಂದೆಡೆ ಸದಾ ಬಿಎಸ್ವೈ ರನ್ನು ಜೈಲಿಗೆ ಹೋಗಿ ಬಂದವರು ಎಂದು ಟೀಕಿಸುತ್ತಿದ್ದ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ಸಿಬಿಐನಿಂದ ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರೋದು ಕೂಡ ತಕ್ಕಮಟ್ಟಿಗೆ ತಲೆತಗ್ಗಿಸುವ ಸಂಗತಿಯಾಗಿದ್ದು ಕೈಪಾಳಯದ ಮಂದಿ‌ ತಲೆಮರೆಸಿಕೊಂಡು ಓಡಾಡುವ ಪ್ರಯತ್ನದಲ್ಲಿದ್ದಂತಿದೆ.

Comments are closed.