ಟ್ವಿಟ್ಟರ್ ಖಾತೆ ರದ್ದು ಬಳಿಕ ಮತ್ತೊಂದು ಶಾಕ್….! ಕಂಗನಾಗೆ ಎದುರಾದ ಸಂಕಷ್ಟವೇನು ಗೊತ್ತಾ?!

ಬಾಲಿವುಡ್ ನಟಿ ಕಂಗನಾ ರನಾವುತ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ಟ್ವಿಟ್ಟರ್ ಖಾತೆ ರದ್ದಾದ ಕಾರಣಕ್ಕೆ ಮುಖಭಂಗ ಅನುಭವಿಸಿದ್ದ ಕಂಗನಾ, ಆ ಬೇಸರದಿಂದ ಚೇತರಿಸಿಕೊಳ್ಳುವ ಮುನ್ನವೇ ಆರೋಗ್ಯ ಕೈಕೊಟ್ಟಿದ್ದು, ಕಂಗನಾಗೆ ಕೊರೋನಾ ಪಾಸಿಟಿವ್ ಆಗಿದೆ.

https://kannada.newsnext.live/karnataka-corona-hike-536641-active-cases/

ಟ್ವಿಟ್ಟರ್ ಖಾತೆಯಲ್ಲಿ ನಿಯಮ ಮೀರಿದ ಶಬ್ದಬಳಕೆ ಕಾರಣಕ್ಕೆ ಕಂಗನಾ ಖಾತೆಯನ್ನು ಟ್ವಿಟ್ಟರ್ ಶಾಶ್ವತವಾಗಿ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಕಂಗನಾ ಮುಂಬೈನಿಂದ ತಮ್ಮ ಹಿಮಾಚಲಪ್ರದೇಶ ನಿವಾಸಕ್ಕೆ ತೆರಳಲು ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಕಂಗನಾಗೆ ಕೊರೋನಾ ತಗುಲಿರುವ ಸಂಗತಿ ಬೆಳಕಿಗೆ ಬಂದಿದೆ.

https://kannada.newsnext.live/corona-vaccine-neglect-karnataka-governament/

ಟ್ವಿಟ್ಟರ್ ಅಕೌಂಟ್ ಕಳೆದುಕೊಂಡಿರುವ ಕಂಗನಾ ಈ ವಿಚಾರವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದು, ನನಗೆ ಎರಡು ದಿನದಿಂದ ಕೊವಿಡ್ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ನಾನು ಪರೀಕ್ಷೆಗೆ ಒಳಪಟ್ಟೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಹೋಂ ಕ್ವಾರಂಟೈನ್ ನಲ್ಲಿದ್ದೇನೆ ಎಂದಿದ್ದಾರೆ.

https://www.instagram.com/p/COmVsjTBQ9e/?igshid=mb75qrm7g3py

ಕಂಗನಾ ರನಾವುತ್ ಗೂ ಮುನ್ನ  ಸೋನುಸೋದ್, ರಣ್ಬೀರ್ ಕಪೂರ್, ಆಲಿಯಾ ಭಟ್, ಅಕ್ಷಯ್ ಕುಮಾರ್,ದಿಪೀಕಾ ಪಡುಕೋಣೆ ಸೇರಿದಂತೆ ಹಲವರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ.

ಕಂಗನಾಗೆ ಈ ಸೋಂಕು ತಗುಲಿರುವುದಾಗಿ ಹೇಳಿಕೊಂಡಿದ್ದಾರೆ. ಕೊರೋನಾದಿಂದ ಕಂಗನಾ ನಟನೆಯ ಬಹುನೀರಿಕ್ಷಿತ ಚಿತ್ರ ತಲೈವಿ ರಿಲೀಸ್ ಕೂಡ ಮುಂದಕ್ಕೆ ಹೋಗಿದೆ.

Comments are closed.