ಅಭಿಮಾನಿಗಳಿಗೆ ಶಾಕ್ ನೀಡಿದ ಮಿಸ್ಟರ್ ಫರ್ಫೆಕ್ಟ್…! ಅಮಿರ ಖಾನ್ ವಿದಾಯ ಹೇಳ್ತಿರೋದು ಯಾವುದಕ್ಕೆ ಗೊತ್ತಾ…?!

ಬಾಲಿವುಡ್ ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ  ಗೆದ್ದ ಮಿಸ್ಟರ್ ಫರ್ಪೆಕ್ಟ್ ಖ್ಯಾತಿಯ ಅಮೀರ್ ಖಾನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.  ಹುಟ್ಟುಹಬ್ಬದ ದಿನದಂದೇ ವಿದಾಯ ಘೋಷಿಸಿದ್ದಾರೆ.ಇಷ್ಟಕ್ಕೂ ಅಮೀರ್ ಖಾನ್ ನಟನೆಗೇ ವಿದಾಯ ಘೋಷಿಸಿದ್ರು ಅಂದುಕೊಂಡ್ರಾ? ಖಂಡಿತ ಇಲ್ಲ. ಅಮೀರ್ ಖಾನ್ ಸೋಷಿಯಲ್ ಮೀಡಿಯಾಗೆ ವಿದಾಯ ಹೇಳಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಮೀರ್ ಖಾನ್ ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ಶುಭಾಶಯಗಳಿಗೆ ಪ್ರತಿಯಾಗಿ ಧನ್ಯವಾದ ಹೇಳಿರೋ ಅಮೀರ್ ಖಾನ್, ಬಳಿಕ ತಾವು ಸೋಷಿಯಲ್ ಮೀಡಿಯಾ ತೊರೆಯುತ್ತಿರುವುದಾಗಿ  ಘೋಷಿಸಿದ್ದಾರೆ.

ಇದು ನನ್ನ ಕೊನೆಯ ಪೋಸ್ಟ್.  ಇತ್ತೀಚಿಗೆ ನಾನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಿದೆ. ಆದರೆ ಇನ್ಮುಂದೆ ಸೋಷಿಯಲ್ ಮೀಡಿಯಾದಿಂದ ಹೊರಗುಳಿಯಲು ನಿರ್ಧಿರಿಸಿದ್ದೇನೆ.  ಆದರೆ ನಿಮ್ಮೊಂದಿಗೆ ನನ್ನ ಬಾಂಧವ್ಯ ಸದಾ ಹೀಗೆ ಇರಲಿದೆ ಎಂದಿದ್ದಾರೆ.

ಅಲ್ಲದೇ ಎಕೆಪಿ ಹೊಸದಾಗಿ ವಾಹಿನಿಯೊಂದನ್ನು ಆರಂಭಿಸಿದೆ. ಅದರಲ್ಲಿ ನನ್ನ ಹಾಗೂ ನನ್ನ ಸಿನಿಮಾದ ಅಪ್ಡೇಟ್ ಗಳು ಸಿಗಲಿದೆ ಎಂದಿದ್ದಾರೆ.

ಸಧ್ಯ ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಇದು ಹಾಲಿವುಡ್ ನ ಫಾರೆಸ್ಟ್ ಗಂಪ್ ನಿಂದ ಪ್ರೇರಿತವಾಗಿ ಹಿಂದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರ.

Comments are closed.