Sunilshetty: ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಕೊರೋನಾ ಡೆಲ್ಟಾ ತಳಿ ಶಾಕ್….! ನಿವಾಸ ಸೀಲ್ ಡೌನ್….!!

ಮುಂಬೈ: ಕರಾವಳಿ ಕುವರ, ಬಾಲಿವುಡ ನಟ ಸುನೀಲ್ ಶೆಟ್ಟಿ ಹಾಗೂ ಕುಟುಂಬಕ್ಕೆ ಕೊರೋನಾ ಡೆಲ್ಟಾ ತಳಿ ಸೋಂಕಿನ ಭೀತಿ ಎದುರಾಗಿದ್ದು, ಸುನೀಲ್ ಶೆಟ್ಟಿ ವಾಸವಾಗಿರುವ ಅಪಾರ್ಟಮೆಂಟ್ ನ್ನು ಬಿಎಂಸಿ ಸೀಲ್ ಡೌನ್ ಮಾಡಿದೆ.

ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಪ್ರಥ್ವಿ ಅಪಾರ್ಟಮೆಂಟ್ ನಲ್ಲಿ ಸುನೀಲ್ ಶೆಟ್ಟಿ ಕುಟುಂಬದ ಜೊತೆ ವಾಸವಾಗಿದ್ದು, ಈ ಅಪಾರ್ಟಮೆಂಟ್ ನಲ್ಲಿ ಒಟ್ಟು ಐದು ಡೆಲ್ಟಾ ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ ಕೊರೋನಾ ಮಾರ್ಗಸೂಚಿಯಂತೆ ಬಿಎಂಸಿ ಅಪಾರ್ಟಮೆಂಟ್ ಸೀಜ್ ಮಾಡಿದ್ದು, ಸೀಲ್ ಡೌನ್ ಮಾಡಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಸುನೀಲ್ ಶೆಟ್ಟಿ ಕುಟುಂಬ 18 ನೇ ಪ್ಲೋರ್ ನಲ್ಲಿ ವಾಸವಾಗಿದ್ದು, ಸುನೀಲ್ ಶೆಟ್ಟಿ ಕುಟುಂಬದ ಯಾರಿಗೂ ಸೋಂಕು ತಗುಲಿಲ್ಲ.

ಆದರೂ ಸುರಕ್ಷತೆಯ ದೃಷ್ಟಿಯಿಂದ ಬಿಎಂಸಿ ಅಪಾರ್ಟಮೆಂಟ್ ನ ಎಲ್ಲನಿವಾಸಿಗಳು ಕೊರೋನಾ ಟೆಸ್ಟ್ ಮಾಡಿಸಲಿದ್ದು, ಫಲಿತಾಂಶದ ಬಳಿಕ ಸುನೀಲ್ ಶೆಟ್ಟಿ ಕುಟುಂಬಕ್ಕೆ ವೈರಸ್ ತಲುಲಿದೆಯೇ? ತಗುಲಿದ್ದರೇ ಯಾವ ವೈರಸ್ ಎಂಬ ಮಾಹಿತಿ ಸಿಗಲಿದೆ.

ಸ್ಯಾಂಡಲ್ ವುಡ್ ಪೈಲ್ವಾನ್ ಸಿನಿಮಾದಲ್ಲಿ ನಟಿಸಿದ್ದ ಸುನೀಲ್ ಶೆಟ್ಟಿ, ಮರಕ್ಕರ್ ಸಿನಿಮಾದಲ್ಲಿ ನಟಿಸಿದ್ದು, ಇದು ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೇ ತೆಲುಗಿನ ಗನಿ ಹಾಗೂ ಹಿಂದಿಯ ಹೆರಾಪೇರಿ-3 ಹಾಗೂ ಹೆಲ್ಲೋ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ.

Comments are closed.