ಸೆಂಟ್ರಲ್ ಜೈಲಿನಲ್ಲಿ ಕೊರೊನಾ ಸೋಂಕು ಪತ್ತೆ ! ಖೈದಿಗಳ ಸಾವಿನ ಶಂಕೆ..?

0

ಬೆಂಗಳೂರು : ಕೊರೊನಾ ಮಹಾಮಾರಿ ಎಲ್ಲೆಡೆ ಆತಂಕವನ್ನೂ ಮೂಡಿಸಿದೆ. ಇದೀಗ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳಿಗೂ ಕೊರೊನಾ ವ್ಯಾಪಿಸಿರೋ ಆತಂಕ ಎದುರಾಗಿದೆ. ಅಲ್ಲದೇ ಇಬ್ಬರು ಖೈದಿಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಅತೀ ಹೆಚ್ಚಿದೆ. ಇದೀಗ ಬೆಂಗಳೂರು ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿನ ಖೈದಿಗಳಿಗೆ ಕೊರೊನಾ ಸೋಂಕು ವ್ಯಾಪಿಸಿರೋ ಆತಂಕಶುರುವಾಗಿದೆ.

ಜೈಲಿನಲ್ಲಿ ಒಂದೇ ಬ್ಯಾರಕ್ ನಲ್ಲಿ ನೂರಾರು ಖೈದಿಗಳಿದ್ದರು, ಅಲ್ಲದೇ ಜೈಲಿನಲ್ಲಿರುವ ಖೈದಿಗಳನ್ನು ಭೇಟಿಯಾಗಲು ಸಾಕಷ್ಟು ಮಂದಿ ಬಂದು ಹೋಗಿದ್ದಾರೆ. ಹೀಗಾಗಿ ಇದರಿಂದಲೇ ಕೊರೊನಾ ಸೋಂಕು ವ್ಯಾಪಿಸಿರೋ ಆತಂಕ ಎದುರಾಗಿದೆ.

ಈಗಲೂ ಒಂದೊಂದು ಬ್ಯಾರಕ್ ಗಳಲ್ಲಿ 70 ರಿಂದ 80 ಮಂದಿ ಖೈದಿಗಳಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸೋ ಆತಂಕವೂ ಶುರುವಾಗಿದೆ. ಆದರೆ ಖೈದಿಗಳ ಸಾವಿನ ವಿಷಯವನ್ನು ಜೈಲಿನ ಅಧಿಕಾರಿಗಳು ಮುಚ್ಚಿಟ್ಟಿದ್ದಾರೆನ್ನುವ ಆರೋಪವೂ ಕೇಳಿಬರುತ್ತಿದೆ.

ಕೊರೊನಾ ಸೋಂಕು ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಪರಿಹಾರವೆನ್ನುವುದು ಅರಿವಿದ್ದರು ಕೂಡ ಜೈಲಿನಲ್ಲಿ ಖೈದಿಗಳನ್ನು ಒಂದೇ ಬ್ಯಾರಕ್ ನಲ್ಲಿ ಬಂಧಿಯನ್ನಾಗಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ಸೋಂಕು ವ್ಯಾಪಿಸುತ್ತೆ ಅನ್ನೋ ಆರೋಪವೂ ಕೇಳಿಬರುತ್ತಿದೆ.

Leave A Reply

Your email address will not be published.