ಇಂದಿರಾ ಕ್ಯಾಂಟೀನ್ ಬಂದ್ : ಮನೆಯಿಂದ ಹೊರಬಂದ್ರೆ ಕೇಸ್ : ಸಿಎಂ ಖಡಕ್ ವಾರ್ನಿಂಗ್

1

ಬೆಂಗಳೂರು : ಕೊರೊನಾ ಸೊಂಕು ಹರಡುತ್ತಿರೋ ರಾಜ್ಯದಾದ್ಯಂತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೂಕು ನುಗ್ಗಲಾಗೋ ಸಾಧ್ಯತೆಯಿರೋದ್ರಿಂದ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗುವುದು. ಯಾರೂ ಕೂಡ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ. ರಾಜ್ಯದಲ್ಲಿ ಕರ್ಪ್ಯೂ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೆಂಗಳೂರು ಮತ್ತು ರಾಜ್ಯದಾದ್ಯಂತ ದಿನಪತ್ರಿಕೆ, ಹಾಲು, ಹಣ್ಣು ಔಷಧಿ ಖರೀದಿಗೆ ಪೊಲೀಸರು ಅಡ್ಡಿ ಮಾಡದೆ ಸಹಕಾರ ನೀಡಬೇಕು. ಆದ್ರೆ ಅನಗತ್ಯವಾಗಿ ಮನೆಯಿಂದ ಹೊರ ಬರುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಹೇಳಿದ್ದಾರೆ. ಪೊಲೀಸರು ನಿಮ್ಮ ಮೇಲೆ ಕ್ರಮಕೈಗೊಂಡರೆ ನಾನು ಜವಾಬ್ದಾರಿಯಲ್ಲ. ಜನರ ಅನುಕೂಲಕ್ಕಾಗಿ ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲಷ್ಟೇ ಅವಕಾಶ ಕಲ್ಪಿಸಲಾಗಿದೆ. ಜನಸಂದಣಿ, ವಾಹನ ಓಡಾಟ ನಿಲ್ಲಬೇಕು. ದೇಶದಾದ್ಯಂತ ವಿಮಾನ ಸೇವೆಯನ್ನೇ ಬಂದ್ ಮಾಡಲಾಗಿದೆ. ಜನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ಎಲ್ಲರೂ ಮನೆಯಲ್ಲಿಯೇ ಇರಿ ಎಂದಿದ್ದಾರೆ.

1 Comment
  1. Anil says

    Hon C M sir,

    I appreciate your concern on the seriousness of the issue. You have announce complete lock down in Bangalore city. But in practice our fellow citizens have not taken it seriously at all. You will see so many vehicles on the streets. People are very casual.

    Unless and until you take very stern police action these casual people will not take it seriously. Let police use their force with lathi .Only police beatings will bring the seriousness. We expect you act swiftly on the offenders who are putting others life on risk.

Leave A Reply

Your email address will not be published.