ಮತ್ತೆ ಹುಟ್ಟಿ ಬಂದ ಚಿರು : ಜೂನಿಯರ್ ಚಿರುಗೆ ಜನ್ಮ ನೀಡಿದ ಮೇಘನಾ

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಆಸೆ ಕೊನೆಗೂ ಫಲಿಸಿದೆ. ಮೇಘನಾ ರಾಜ್ ಸರ್ಜಾ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದಲ್ಲೀಗ ಸಂಭ್ರಮವೋ ಸಂಭ್ರಮ.

ಕೆ.ಆರ್.ನಗರದಲ್ಲಿರುವ ಚಿರು ಸ್ನೇಹಿತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆ 11.07 ಗಂಟೆಗೆ ಮೇಘನಾ ರಾಜ್ ಸರ್ಜಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಚಿರಂಜೀವಿ ಸರ್ಜಾ ಮತ್ತೆ ಹುಟ್ಟಿ ಬಂದಿದ್ದಾರೆ ಅಂತಾ ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳು ಸಂತಸದಲ್ಲಿದ್ದಾರೆ.

ಮೇಘನಾ ಸರ್ಜಾ ಅವರಿಗೆ ಹೆರಿಗೆಯಾಗುತ್ತಿದ್ದಂತೆಯೇ ಮಗುವಿನ ಮುಖವನ್ನು ಮೊದಲು ಚಿರಂಜೀವಿ ಸರ್ಜಾ ಅವರಿಗೆ ತೋರಿಸಲಾಯಿತು. ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಚಿರಂಜೀವಿ ಸರ್ಜಾ ಅವರ ಭಾವಚಿತ್ರಕ್ಕೆ ಮಗುವನ್ನು ಇರಿಸಿ, ತಂದೆಯ ಮುಖವನ್ನು ತೋರಿಸಲಾಯಿತು.

ಚಿರಂಜೀವಿ ಸರ್ಜಾ ಅಗಲಿಕೆಯ ದಿನದಿಂದಲೂ ಚಿರು ಮೇಘನಾ ಸರ್ಜಾ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರಲಿ ಅಂತಾ ಲಕ್ಷಾಂತರ ಅಭಿಮಾನಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಹಲವರು ಮೇಘನಾ ಸರ್ಜಾಗೆ ಗಂಡು ಮಗುವೇ ಆಗುತ್ತೆ ಅಂತಾನೂ ಹೇಳಿದ್ದರು.

ಅಷ್ಟೇ ಅಲ್ಲಾ ಮೇಘನಾ, ಧ್ರುವ ಸರ್ಜಾ ಸೇರಿದಂತೆ ಕುಟುಂಬ ಸದಸ್ಯರು ಕೂಡ ಚಿರು ಹುಟ್ಟಿ ಬರ್ತಾನೆ ಅನ್ನೋ ಮಾತನ್ನೇ ಪದೇ ಪದೇ ಹೇಳಿತ್ತಿದ್ದರು. ಅಲ್ಲದೇ ಚಿರಂಜೀವಿ ಸರ್ಜಾ ಕೂಡ ಗಂಡು ಮಗುವಿನ ಕನಸು ಕಂಡಿದ್ದರು. ಇದೀಗ ಎಲ್ಲರ ಹರಿಕೆ, ಕನಸು ಫಲಿಸಿದೆ.

Comments are closed.