ಹೈದ್ರಾಬಾದ್ ಮಳೆಗೆ ಮರುಗಿದ ರಶ್ಮಿಕಾ…! ಪರಭಾಷಾ ವ್ಯಾಮೋಹಕ್ಕೆ ಕೆರಳಿದ ಕನ್ನಡಿಗರು…!

ಹೈದ್ರಾಬಾದ್: ಕನ್ನಡದಲ್ಲಿ ಹೆಸರುಗಳಿಸಿ, ಬಳಿಕ ಪರಭಾಷೆಗೆ ಹಾರಿ. ಕನ್ನಡವನ್ನೇ ಮರೆತಂತೇ ಆಡೋದು ನಟ-ನಟಿಯರ  ಮಾಮೂಲಿ ವರಸೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಕೂಡ ಹೊರತಲ್ಲ. ಇತ್ತೀಚಿಗೆ ಪರಭಾಷೆಯಲ್ಲೇ ನೆಲೆಕಂಡುಕೊಂಡಿರೋ ರಶ್ಮಿಕಾ ಹೈದ್ರಾಬಾದ್ ಮಳೆಗೆ ನೊಂದವರನ್ನು ಸಂತೈಸಿದ್ದು, ಕೊಚ್ಚಿಕೊಂಡು ಹೋಗ್ತಿರೋ ಕರ್ನಾಟಕ ಕಾಣಲಿಲ್ಲವೇನಮ್ಮೀ ಅಂತಾ ಕನ್ನಡಿಗರು ಕೇಳ್ತಿದ್ದಾರೆ.

ಕಿರಿಕ್ ಪಾರ್ಟಿ ಮೂಲಕ ಕನ್ನಡಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಎರಡು ವರ್ಷದ ಹಿಂದೆ ಪೊಗರು ಸಿನಿಮಾ ಒಪ್ಪಿಕೊಂಡಿದ್ದನ್ನು ಬಿಟ್ರೆ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿಲ್ಲ. ತೆಲುಗು ಚಿತ್ರರಂಗದಲ್ಲಿ ಮೇಲಿಂದ ಮೇಲೆ ಆಫರ್ ಪಡಿತೀರೋ ರಶ್ಮಿಕಾ ಅದಕ್ಕಾಗಿ ಹೈದ್ರಾಬಾದ್ ನಲ್ಲಿ ಒಂದು ಮನೆ ಕೂಡ ಖರೀದಿಸಿದ್ದಾರೆ.

ಈ ಮಧ್ಯೆ ವಾಯುಭಾರ ಕುಸಿತದಿಂದ ಸುರಿತೀರೋ ಅಕಾಲಿಕ ಮಳೆಯಿಂದ ಕರ್ನಾಟಕ ಅಕ್ಷರಷಃ ಮುಳುಗಿ ಹೋಗಿದ್ದರೇ, ಅತ್ತ ಹೈದ್ರಾಬಾದ್ ನಲ್ಲೂ ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಂದಾಜು 30 ಸಾವಿರಕ್ಕೂ ಅಧಿಕ ಜನರು ಮಳೆಯಿಂದ ಸಂಕಷ್ಟಕ್ಕಿಡಾಗಿದ್ದು, ತೆಲುಗು ಚಿತ್ರರಂಗದ ನಟರು ಸಹಾಯಹಸ್ತ ಚಾಚಿದ್ದಾರೆ.

ಈ ಮಧ್ಯೆ ಹೈದ್ರಾಬಾದ್ ಮಳೆ ಸಂತ್ರಸ್ಥರಿಗಾಗಿ ಮಿಡಿದ ರಶ್ಮಿಕಾ, ಟ್ವೀಟ್ ಮಾಡಿ ಕಾಳಜಿ ತೋರಿದ್ದಾರೆ. ಹೈದ್ರಾಬಾದ್ ನಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ನಾನು ಕೇಳಿದೆ. ಹೈದ್ರಾಬಾದ್ ದಯವಿಟ್ಟು ನಿನ್ನ ಬಗ್ಗೆ ಕಾಳಜಿ ವಹಿಸು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ಈ ಟ್ವೀಟ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ರೋಶ ವ್ಯಕ್ತವಾಗ್ತಿದ್ದು, ಬೆಂಗಳೂರು, ಉತ್ತರ ಕರ್ನಾಟಕ ಎಲ್ಲೆಡೆಯೂ ಪ್ರವಾಹ ಸ್ಥಿತಿ ಇದೆ. ಅಷ್ಟೇ ಯಾಕೆ ಸ್ವತಃ ರಶ್ಮಿಕಾ ಮಂದಣ್ಣ ತವರು ಕೊಡಗಿನಲ್ಲೂ ಪ್ರವಾಹದ ಸ್ಥಿತಿ ಇದೆ. ಆದರೆ ನಿಮಗೆ ಇದ್ಯಾವುದು ಕಣ್ಣಿಗೆ ಕಾಣಿಸಲಿಲ್ಲ. ನೀವೆಲ್ಲ ಪರಭಾಷೆಗೆ ಮಾರಾಟವಾಗಿದ್ದೀರಾ.

ನಿಮಗೆ ಗುರುತಿಸಿಕೊಳ್ಳೋಕೆ, ಬೆಳಕಿಗೆ ಬರೋಕೆ ಕರ್ನಾಟಕ ಮತ್ತು ಕನ್ನಡ ಬೇಕು. ಆಮೇಲೆ ತಿಂದ ಅನ್ನದ ನೆನಪು ಇರೋದಿಲ್ಲ ಅಂತ ಚಾಟಿ ಬೀಸಿದ್ದಾರೆ. ಅಲ್ಲಿನ ನಿವಾಸಿಯಾಗಿ, ನಟಿಯಾಗಿ ಹೈದ್ರಾಬಾದ್ ಗೆ ನಿಮ್ಮ ಕಾಳಜಿ ತಪ್ಪಲ್ಲ. ಆದರೆ ನಿಮಗೆ ನೆಲೆ ಕೊಟ್ಟ ಕನ್ನಡ ಕರ್ನಾಟಕ ಮರೆತು ಹೋಗಿದ್ದ್ಯಾಕೆ ಅಂತ ಇನ್ನು ಕೆಲವರು ಪ್ರಶ್ನೆ ಮಾಡ್ತಿದ್ದಾರೆ.

Comments are closed.