ಸಿಂ ಪುತ್ರ ವಿಜಯೇಂದ್ರ ವಿರುದ್ದ ಅಸಮಾಧಾನ : ಬಿಜೆಪಿಯಲ್ಲಿ ಧಗಧಗ..ಯಡಿಯೂರಪ್ಪಗೆ ಬಿಗ್ ಶಾಕ್

0

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರದಲ್ಲಿ ಮಂತ್ರಿಸ್ಥಾನದಿಂದ ವಂಚಿತರಾಗಿರೋ ಮೂಲ ಬಿಜೆಪಿ ಶಾಸಕರು ಇದೀಗ ಸರಕಾರದ ವಿರುದ್ದವೇ ತೊಡೆತಟ್ಟಿದ್ದಾರೆ. ಉಮೇಶ್ ಕತ್ತಿ ನೇತೃತ್ವದಲ್ಲಿ ಸುಮಾರು 7 ರಿಂದ 8 ಮಂದಿ ಹಿರಿಯ ಬಿಜೆಪಿ ಶಾಸಕರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿವಾಸದಲ್ಲಿ ತಡರಾತ್ರಿ ರಹಸ್ಯಸಭೆ ನಡೆಸಿದ್ದಾರೆ. ರಹಸ್ಯ ಸಭೆಯ ಬೆನ್ನಲ್ಲೇ ಸಿಎಂ ಯಡಿಯೂರಪ್ಪಗೆ ಹೊಸ ತಲೆನೋವು ಶುರುವಾಗಿದೆ.
ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೇರಿದ್ದ ಬಿಜೆಪಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಮೂರು ವರ್ಷಗಳ ಕಾಲ ಸುಭದ್ರ ಆಡಳಿತ ನೀಡುತ್ತೆ ಅಂತಾನೇ ಹೇಳಲಾಗುತ್ತಿತ್ತು. ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನಗೆಲ್ಲೋ ಮೂಲಕ ಸ್ಪಷ್ಟ ಬಹುಮತಗಳಿಸಿತ್ತು. ಆದ್ರೆ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮೂಲ ಬಿಜೆಪಿ ಶಾಸಕರನ್ನು ಕಡೆಗಣಿಸಿರೋ ಬಿ.ಎಸ್.ಯಡಿಯೂರಪ್ಪ ವಲಸೆ ಶಾಸಕರಿಗೆ ಮಣೆ ಹಾಕಿದ್ದರು. ಜೊತೆಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಿಎಂ ಪುತ್ರ ವಿಜಯೇಂದ್ರ ತೊಡಕಾಗುತ್ತಿದ್ದಾರೆ ಅನ್ನೋ ಅಸಮಾಧಾನ ಮೂಲ ಬಿಜೆಪಿ ಶಾಸಕರದ್ದು. ಈ ಹಿನ್ನೆಲೆಯಲ್ಲಿಯೇ ಸಚಿವ ಸ್ಥಾನದಿಂದ ವಂಚಿತರಾಗಿರೋ ಮೂಲ ಬಿಜೆಪಿಯ ಹಿರಿಯ ಶಾಸಕರೇ ತಡರಾತ್ರಿ ರಹಸ್ಯಸಭೆ ನಡೆಸಿರೋದು ಬಿಜೆಪಿಗೆ ಆಘಾತ ನೀಡಿದೆ.
ಬಿಜೆಪಿ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಬಜೆಟ್ ಅಧಿವೇಶನದ ನಂತರ ಬಿಜೆಪಿಯಲ್ಲಿ ಬಾರೀ ಬದಲಾವಣೆಗಳಾಗುತ್ತೆ ಅನ್ನೋ ಸುಳಿವು ನೀಡಿದ್ದರು. ಇದೀಗ ಮೂಲ ಬಿಜೆಪಿ ನಾಯಕರೇ ಸರಕಾರದ ವಿರುದ್ದ ಮುನಿಸಿಕೊಂಡಿದ್ದಾರೆ. ಹೀಗಾಗಿ ಅಧಿವೇಶನದ ಬಳಿಕ ರಾಜ್ಯ ಸರಕಾರಕ್ಕೆ ಮೂಲ ಬಿಜೆಪಿ ನಾಯಕರೇ ತೊಡಕಾಗುತ್ತಾರಾ ಅನ್ನೋ ಅನುಮಾನವೂ ವ್ಯಕ್ತವಾಗುತ್ತಿದೆ. ರಹಸ್ಯಸಭೆ ವಿಷಯ ತಿಳಿಯುತ್ತಿದ್ದಂತೆಯೇ ಸಿಎಂ ಯಡಿಯೂರಪ್ಪ ಜಗದೀಶ್ ಶೆಟ್ಟರ್ ಅವರನ್ನು ತನ್ನ ನಿವಾಸಕ್ಕೆ ಕರೆಯಿಸಿಕೊಂಡು ಸಭೆ ನಡೆಸಿದ್ದಾರೆ. ರಹಸ್ಯ ಸಭೆಯ ಕುರಿತು ಸಿಎಂ ಮಾಹಿತಿಯನ್ನು ಕಲೆ ಹಾಕಿದ್ದಾರೆ.

Leave A Reply

Your email address will not be published.