ಕಳಪೆಮಟ್ಟದ ಶೂ, ಸಾಕ್ಸ್ , ಬ್ಯಾಡ್ಜ್ ವಿತರಣೆ : ಶಾಲಾ ಮಕ್ಕಳ ವಸ್ತುಗಳಲ್ಲಿ ಬಾರಿ ಗೋಲ್ ಮಾಲ್ !

0

ಬೀದರ್ : ಶೂ, ಸಾಕ್ಸ್ ಧರಿಸೋದು ಬಡಮಕ್ಕಳಿಗೆ ಕನಸಿನ ಮಾತು. ಇಂತಹ ಮಕ್ಕಳಿಗಾಗಿಯೇ ಸರಕಾರ ಉಚಿತವಾಗಿ ಶೂ, ಸಾಕ್ಸ್ ವಿತರಣೆಗೆ ಮುಂದಾಗಿದೆ. ಮಕ್ಕಳು ಶೂ ತೊಟ್ಟು ಸಂಭ್ರಮದಿಂದಲೇ ಶಾಲೆಗೆ ಹಾಜರಾಗ್ತಿದ್ರು. ಆದ್ರೆ ಈ ಬಾರಿ ಶೈಕ್ಷಣಿಕ ಋತು ಮುಗಿಯುವ ಹೊತ್ತಲ್ಲಿ ಶೂ ವಿತರಣೆಗೆ ಮುಂದಾಗಿದೆ. ಅದ್ರಲ್ಲೂ ವಿತರಿಸಿರೋ ಶೂ, ಸಾಕ್ಸ್, ಬ್ಯಾಡ್ಜ್ ಕಳಪೆ ಗುಣಮಟ್ಟದ್ದಾಗಿದ್ದು, ಬಾರೀ ಅಕ್ರಮ ನಡೆದಿರೋದು ಬಯಲಾಗಿದೆ.


ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಬ್ಯಾಡ್ಜ್ ವಿತರಿಸೋ ಹೊಣೆಯನ್ನು ಸರಕಾರ ಡಾ.ಬಾಬು ನವಜೀವನ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಟೆಂಡರ್ ವಹಿಸಿಕೊಂಡಿರೋ ಗುತ್ತೆಗೆದಾರ ಇದೀಗ ರಾಜ್ಯದಾದ್ಯಂತ ಶೂ ಸರಬರಾಜು ಮಾಡೋದಕ್ಕೆ ಮುಂದಾಗಿದ್ದಾನೆ. ಅದ್ರಲ್ಲೂ ವಿದ್ಯಾರ್ಥಿಗಳ ಬಿಳಿ ಶೂಗೆ 265 ರೂಪಾಯಿ ಮತ್ತು ವಿದ್ಯಾರ್ಥಿನಿಯರ ಕಪ್ಪು ಶೂಗೆ 300 ರೂಪಾಯಿ..ಆದರೆ ವಿತರಿಸಿರೋ ಶೂ ಮತ್ತು ಸಾಕ್ಸ್ ಅತ್ಯಂತ ಕಳಪೆ ಮಟ್ಟದ್ದಾಗಿದ್ದು, ತಿಂಗಳು ಬಾಳಿಕೆ ಬಂದ್ರೂ ಹೆಚ್ಚು ಅನ್ನುವಂತಿದೆ.

ಮಾರುಕಟ್ಟೆಯಲ್ಲಿ ಗುಣಮಟ್ಟದ ಶೂ 80 ರಿಂದ 100 ರೂಪಾಯಿಗೆ ಲಭ್ಯವಾಗುತ್ತೆ. ಆದರೆ 265 ರಿಂದ 300 ರೂಪಾಯಿ ಕೊಟ್ಟು ಕಳಪೆ ಗುಣಮಟ್ಟದ ಶೂ, ಸಾಕ್ಸ್ ಪಡೆಯೋದಕ್ಕೆ ವರ್ಷವಿಡೀ ಕಾಯೋ ಅಗತ್ಯವಿತ್ತಾ ಅನ್ನೋದು ವಿದ್ಯಾರ್ಥಿಗಳ ಪ್ರಶ್ನೆ. ರಾಜ್ಯದ 29 ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಿರೋ ಕಳಪೆ ಶೂ ವಿರುದ್ದ ವಿದ್ಯಾರ್ಥಿಗಳು ಆಕ್ರೋಶವನ್ನು ಹೊರ ಹಾಕಿದ್ದಾರೆ. ಒಂದೆರಡು ತಿಂಗಳಲ್ಲಿ ಅಂತಿಮ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಮುಗಿದ ನಂತ್ರ ಕೊಟ್ಟಿದರೆ ಮನೆಗೆ ಹೋಗಿ ಎಸೆಯುತ್ತಿದ್ದೇವು. ಇಲ್ಲವಾದ್ರೆ ಒಂದೊಮ್ಮೆ ಸರಕಾರ ವಿದ್ಯಾರ್ಥಿಗಳ ಖಾತೆಗೆ ಹಣವನ್ನು ವರ್ಗಾಯಿಸಿದ್ರೆ ಮಕ್ಕಳು ತಮಗೆ ಬೇಕಾದ ಶೂ, ಸಾಕ್ಸ್ ಖರೀದಿ ಮಾಡುತ್ತಿದ್ದೇವು ಅಂತಾ ವಿದ್ಯಾರ್ಥಿ ವಿಶಾಲ್ ಹೇಳುತ್ತಿದ್ದಾನೆ.
ಒಟ್ಟಿನಲ್ಲಿ ಇಷ್ಟು ದಿನ ವಸತಿ, ಊಟ, ಆಹಾರ ಪೂರೈಕೆಯಲ್ಲಿ ಅಕ್ರಮ ನಡೆಯುತ್ತಿತ್ತು. ಆದರೆ ಇದೀಗ ಬಡಮಕ್ಕಳಿಗೆ ಶೂ ಸಾಕ್ಷ ವಿತರಣೆಯಲ್ಲಿಯೂ ಅಕ್ರಮವೆಸಗಿರೋದು ನಿಜಕ್ಕೂ ದುರಂತ. ಸರಕಾರ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕಾದ ಅಗತ್ಯವಿದೆ. ಈ ಮೂಲಕ ಬಡಮಕ್ಕಳಿಗೆ ನ್ಯಾಯ ಒದಗಿಸೋದ್ರ ಜೊತೆ ಕಳಪೆ ಗುಣಮಟ್ಟದ ಶೂ, ಸಾಕ್ಸ್ ವಿತರಿಸಿರೋ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಕೂಗು ಕೇಳಿಬಂದಿದೆ.

Leave A Reply

Your email address will not be published.