ಸಚಿವ ಕೋಟ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ : ಹೊರನಾಡ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಹೀಗಾಗಿ ಹೊರ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊರ ರಾಜ್ಯಗಳಲ್ಲಿ ಸಿಲುಕಿರುವ ಜನರ ಸಮಸ್ಯೆಯನ್ನು ಆಲಿಸೋ ಸಲುವಾಗಿಯೇ ರಾಜ್ಯ ಸರಕಾರ ಇದೀಗ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಸಹಾಯವಾಣಿಯನ್ನು ಆರಂಭಿಸಿದೆ.

ಮುಂಬೈನಲ್ಲಿ ನೆಲೆಸಿರೊ ಲಕ್ಷಾಂತರ ಕನ್ನಡಗರನ್ನು ರಾಜ್ಯಕ್ಕೆ ಬರಲು ಅವಕಾಶ ಕಲ್ಪಿಸುವಂತೆ ಸಾಕಷ್ಟು ಮಂದಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದರು.

ಆದರೆ ಲಾಕ್ ಡೌನ್ ಆದೇಶದಿಂದ ಅದು ಅಸಾಧ್ಯವಾಗಿರೋದ್ರಿಂದಾಗಿ ಹೊರ ರಾಜ್ಯಗಳಲ್ಲಿ ನೆಲೆಸಿರುವವರ ಸಮಸ್ಯೆಗಳನ್ನು ಆಲಿಸುವುದರ, ಅಗತ್ಯ ವಸ್ತುಗಳನ್ನು ಪೂರೈಸೋ ಸಲುವಾಗಿ ಸಹಾಯವಾಣಿ ಆರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವ ಕೋಟ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಇದೀಗ ಸಹಾಯವಾಣಿಯನ್ನು ಆರಂಭಿಸಿದೆ.

ಸಹಾಯವಾಣಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದು, ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ ಮಣಿವಣ್ಣನ್ ಮೊದಲಾದವರು ಉಪಸ್ಥಿತರಿದ್ದರು. ಇಂದಿನಿಂದಲೇ ಸಹಾಯವಾಣಿಗೆ ಕಾರ್ಯಾರಂಭ ಮಾಡಿದೆ.

ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿರುವ ಕಲ್ಯಾಣ ಸುರಕ್ಷಾ ಭವದಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸಲಿದ್ದು, ಪ್ರತೀ ಪಾಳಿಯಲ್ಲಿಯೂ 50 ಜನರಂತೆ ದಿನ 24 ಗಂಟೆಗಳ ಕಾಲವೂ ಸಹಾಯವಾಣಿ ಕೆಲಸ ನಿರ್ವಹಿಸಲಿದೆ. ಹೊರ ರಾಜ್ಯಗಳಲ್ಲಿ ನೆಲೆಸಿರುವ ಜನರು ಸಹಾಯವಾಣಿಗೆ ಕರೆ ಮಾಡಿ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರವನ್ನು ಒದಗಿಸಲಿದ್ದಾರೆ. ಹೊರ ರಾಜ್ಯಗಳಲ್ಲಿ ನೆಲೆಸಿರುವವರು ಸಹಾಯವಾಣಿಯ ಸಂಖ್ಯೆ -080 22636800 ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

Leave A Reply

Your email address will not be published.