ಮಂಡ್ಯ ಸೋಂಕಿತನಿಂದ ಉಡುಪಿಗೂ ವ್ಯಾಪಿಸುತ್ತಾ ಕೊರೊನಾ ?

0

ಕುಂದಾಪುರ : ಕೊರೊನಾ ವೈರಸ್ ಸೋಂಕಿನ ವಿರುದ್ದದ ಹೋರಾಟದಲ್ಲಿ ಉಡುಪಿ ಜಿಲ್ಲೆ ಯಶಸ್ವಿಯಾಗಿದೆ. ಇದೀಗ ಗ್ರೀನ್ ಝೋನ್ ಗೆ ಸೇರ್ಪಡೆಯಾಗಿದೆ. ಆದ್ರೀಗ ಮಂಡ್ಯ ಮೂಲಕ ವ್ಯಕ್ತಿಯಿಂದ ಕೊರೊನಾ ಸೋಂಕು ವ್ಯಾಪಿಸೋ ಆತಂಕ ಎದುರಾಗಿದೆ.

ಮುಂಬೈನಿಂದ ಸರಕು ಸಾಗಾಟ ವಾಹನದಲ್ಲಿ ಬಂದಿದ್ದ ಮಂಡ್ಯ ಮೂಲದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಎಪ್ರಿಲ್ 21ರಂದು ವ್ಯಕ್ತಿ ಮುಂಬೈನಿಂದ ಸರಕು ಸಾಗಾಟದ ವಾಹನದ ಮೂಲಕ ಉಡುಪಿ ಜಿಲ್ಲೆಗೆ ಬಂದಿದ್ದ.

ಕುಂದಾಪುರ ತಾಲೂಕಿನ ತ್ರಾಸಿ ಸಮೀಪದ ಪೆಟ್ರೋಲ್ ಬಂಕ್ ವೊಂದರಲ್ಲಿ ಸ್ನಾನ ಮಾಡಿದ್ದಾಗಿ ವ್ಯಕ್ತಿ ತಿಳಿಸಿದ್ದಾನೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಪೊಲೀಸರು ವ್ಯಾಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕುತ್ತಿದ್ದಾರೆ.

ವ್ಯಕ್ತಿ ಸರಕು ತುಂಬಿದ ಲಾರಿಯಲ್ಲಿ ಬೈಂದೂರಿನಿಂದ ಸಾಸ್ತಾನದವರೆಗೂ ಸಂಚರಿಸಿದ್ದಾನೆ. ಆದರೆ ನಿಖರವಾಗಿ ಎಲ್ಲಿ ಸ್ನಾನ ಮಾಡಿದ್ದಾನೆ ಅನ್ನೋ ಬಗ್ಗೆ ಖಚಿತತೆ ಇಲ್ಲಾ. ಅಲ್ಲದೇ ರಾತ್ರಿಯ ಹೊತ್ತು ಕುಂದಾಪುರ, ಕೋಟೇಶ್ವರ, ಸಾಸ್ತಾನದಲ್ಲಿ ನಿಲ್ಲಿಸಿರೋ ಸಾಧ್ಯತೆಯಿದೆ. ಅಲ್ಲದೇ ಆತ ಬೇರೆಯಾರ ಜೊತೆಯಾದ್ರೂ ಸಂಪರ್ಕ ಹೊಂದಿದ್ದನಾ ಅನ್ನೋ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.

ಒಂದು ವೇಳೆ ಆತ ಇಲ್ಲಿಯೇ ಸ್ನಾನ ಮಾಡಿರುವುದು ಖಾತ್ರಿಯಾದರೆ, ಪೆಟ್ರೋಲ್ ಬಂಕ್ ನ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯನ್ನು ಕಂಟೋನ್ಮೆಂಟ್ ವಲಯವೆಂದು ಘೋಷಿಸಿ, ಸೀಲ್ ಡೌನ್ ಮಾಡಲು ಡಿಸಿಯವರು ಆದೇಶಿಸಿದ್ದಾರೆ. ಜತೆಗೆ ಪೆಟ್ರೋಲ್ ಬಂಕ್ ನ ಎಲ್ಲ ಸಿಬಂದಿಯನ್ನು ಹಾಗೂ ಆ ದಿನ ಶಿರೂರು ಗಡಿಯಲ್ಲಿನ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲರನ್ನು ಕೂಡ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ.

Leave A Reply

Your email address will not be published.