ಕೊರೋನಾ ಸಂಕಷ್ಟಕ್ಕೆ ಮಿಡಿದ ಕಿಚ್ಚ….! ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂದ ಕೈತುತ್ತು ಯೋಜನೆ….!!

ಕೊರೋನಾ ಸಂಕಷ್ಟಕ್ಕೆ ಭಾರತ,ಕರ್ನಾಟಕ ತತ್ತರಿಸಿ ಹೋಗಿದೆ. ದಿನಗೂಲಿ ನೌಕರರು, ಮಧ್ಯಮವರ್ಗದ ಜನರು ಮುಂದೇನು ಎಂಬ ದಾರಿಕಾಣದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥವರ ಸಹಾಯಕ್ಕೆ ಧಾವಿಸಿರುವ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.

ಈಗಾಗಲೇ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಿಂದ ಸಾವನ್ನಪ್ಪಿದವರ ಕುಟುಂಬದ ಸಂಕಷ್ಟಕ್ಕೆ ಮಿಡಿದ ಸುದೀಪ್ ಆರ್ಥಿಕ ಸಹಾಯ ಘೋಷಿಸಿದ್ದಾರೆ. ಈ ಮಧ್ಯೆ ನಗರದಲ್ಲಿ ಕೊರೋನಾ ವಾರಿಯರ್ಸ್ ಗಳು ಹಾಗೂ ಅಗತ್ಯ ಉಳ್ಳವರಿಗಾಗಿ ಇಂದಿನಿಂದ ಸುದೀಪ್ ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ.

ಕಿಚ್ಚ್ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಚ್ಚನ ಕೈತುತ್ತು ಎಂಬ ಹೆಸರಿನಡಿ ಊಟ ಒದಗಿಸಲಾಗುತ್ತದೆ.

ಅಗತ್ಯ ಉಳ್ಳವರು ಈ ವ್ಯವಸ್ಥೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ನ್ನು 6360334455 ದೂರವಾಣಿ ಸಂಖ್ಯೆ ಮೂಲಕ ಸಂರ್ಪಕಿಸಬಹುದಾಗಿದೆ.

https://kannada.newsnext.live/twitter-helphand-india-110cr-jack-ceo-corona-covid-19/amp/

ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧೆಡೆ ಅಗತ್ಯ ಉಳ್ಳವರಿಗಾಗಿ ಕಿಚ್ಚ ಸುದೀಪ್ ಟ್ರಸ್ಟ್ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕಲ್ಪಿಸಿದೆ. ಅದರೊಂದಿಗೆ ಈಗ ಆಹಾರದ ವ್ಯವಸ್ಥೆ ಕಲ್ಪಿಸುತ್ತಿದೆ.

https://kannada.newsnext.live/corona-isolation-center-open-all-district-arun-kalgadde-demand/amp/

ಸಮಾಜಸೇವೆ ಹಾಗೂ ಅಗತ್ಯ ಉಳ್ಳವರ ನೆರವಿಗೆ ಸದಾ ಸಿದ್ಧವಿರುವ ಕಿಚ್ಚ ಸುದೀಪ್, ಇತ್ತೀಚಿಗಷ್ಟೇ ಬಿಗ್ ಬಾಸ್ ಸೀಸನ್ 6 ಸ್ಪರ್ಧಿ ನಟಿ ಸೋನು ಪಾಟೀಲ್ ತಾಯಿ ಅನಾರೋಗ್ಯದ ವೇಳೆ ಲಕ್ಷಾಂತರ ರೂಪಾಯಿ ವ್ಯಯಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದರು.

 

Comments are closed.