ಏ. 14ರ ನಂತರ ಮುಂದೇನು ? ಮುಂದುವರಿಯುತ್ತಾ ಲಾಕ್ ಡೌನ್ ? ಯಾರಿಗೆ ವಿನಾಯಿತಿ? ಜಾರಿಯಾಗುತ್ತಾ ಹೊಸ ನಿಯಮ?

0

ನವದೆಹಲಿ : ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದೆ. ಎಪ್ರಿಲ್ 14ರಂದು ಲಾಕ್ ಡೌನ್ ಅಂತ್ಯವಾಗಲಿದೆ. ಕೊರೊನಾ ಸೋಂಕು ಹೆಚ್ಚುತ್ತಿರೋ ಬೆನ್ನಲ್ಲೇ ಲಾಕ್ ಡೌನ್ ಅಂತ್ಯವಾಗಲ್ಲಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದ್ರೆ ಕೇಂದ್ರ ಸರಕಾರ ಎಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯಗೊಳಿಸೋ ಪ್ಲ್ಯಾನ್ ನಲ್ಲಿದೆ ಎನ್ನಲಾಗುತ್ತಿದೆ.

ಆದರೆ ಲಾಕ್ ಡೌನ್ ಅವಧಿ ಮುಕ್ತಾಯವಾದ ನಂತರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಅನ್ನೋದೇ ಕೇಂದ್ರ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಧಾನಿ ಮೋದಿ ಮುಖ್ಯಮಂತ್ರಿಗಳ ಜೊತೆಗೆ ನಡೆಸಿರೋ ವಿಡಿಯೋ ಸಂವಾದದಲ್ಲಿಯೂ ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಒಮ್ಮೆಲೆ ಲಾಕ್ ಡೌನ್ ತೆರವು ಮಾಡೋದ್ರಿಂದ ಇನ್ನಷ್ಟು ಸಮಸ್ಯೆಗೆ ಎದುರಾಗೋ ಸಾಧ್ಯತೆಯಿದೆ ಅಂತಾ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಲಾಕ್ ಡೌನ್ ಮುಂದುವರಿಕೆ ಮಾಡೋದಕ್ಕೆ ಆರ್ಥಿಕ ತಜ್ಞರು ದೇಶದ ಆರ್ಥಿಕತೆಯ ಮೇಲೆ ಬೀಳ ಬಹುದಾದ ಪರಿಣಾಮಗಳನ್ನು ಕೇಂದ್ರ ಸರಕಾರದ ಮುಂದಿಟ್ಟಿದ್ದಾರೆ.

ಲಾಕ್ ಡೌನ್ ನಂತರ ದೇಶದಾದ್ಯಂತ ಏಕರೂಪದ ಕಾರ್ಯನೀತಿ ಜಾರಿಗೆ ಬರೋ ಸಾಧ್ಯತೆಯಿದೆ. ಕೇಂದ್ರ ಸರಕಾರ ಈಗಾಗಲೇ ರಾಜಕಾರಣಿಗಳು, ಉದ್ಯಮಿಗಳು, ವೈದ್ಯಕೀಯ ತಜ್ಞರು, ಚಿಂತಕರು, ನೀತಿರೂಪಕರು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿನ ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲರ ಅಭಿಪ್ರಾಯವನ್ನು ಕ್ರೂಢಿಕರಿಸಿ ಒಮ್ಮೆಲೆ ಲಾಕ್ ಡೌನ್ ತೆರವು ಮಾಡೋ ಬದಲಾಗಿ. ಹಂತ ಹಂತವಾಗಿ ಲಾಕ್ ಡೌನ್ ತೆರವಿಗೆ ಮುಂದಾಗಿದೆ. ಈ ಕುರಿತು ಕೆಲ ಬಿಜೆಪಿ ನಾಯಕರು ಒಂದಿಷ್ಟು ಸುಳಿವನ್ನೂ ಬಿಟ್ಟುಕೊಟ್ಟಿದ್ದಾರೆ.

ಲಾಕ್ ಡೌನ್ ಅವಧಿ ಎಪ್ರಿಲ್ 14ಕ್ಕೆ ಮುಕ್ತಾಯಗೊಂಡರೂ ಕೂಡ ಒಮ್ಮೆಲೆ ವ್ಯವಸ್ಥೆಗಳೆಲ್ಲಾ ಸರಿ ಹೋಗೋದಿಲ್ಲ. ಒಟ್ಟು ನಾಲ್ಕು ವಾರಗಳಲ್ಲಿ ಹಾಗೂ ನಾಲ್ಕು ಹಂತಗಳಲ್ಲಿ ಲಾಕ್ ಡೌನ್ ತೆರವು ಮಾಡೋ ಯೋಚನೆಯನ್ನು ಕೇಂದ್ರ ಸರಕಾರ ರೂಪಿಸಿಕೊಂಡಿದೆ ಎನ್ನಲಾಗುತ್ತಿದೆ. ಆರಂಭದ ಹಂತದಲ್ಲಿ ಆಹಾರ ಮತ್ತು ಅಗತ್ಯ ಸೇವೆಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಆರಂಭಿಸಲು ಅವಕಾಶವನ್ನು ಕಲ್ಪಿಸುವ ಸಾಧ್ಯತೆಯಿದೆ. ಅದರಲ್ಲೂ ಯಂತ್ರೋಪಕರಣಗಳಿಂದಲೇ ಆಹಾಯ ತಯಾರಾಗೋ ಘಟಕಗಳನ್ನು ಮೊದಲು ಆರಂಭಿಸುವ ಸಾಧ್ಯತೆಯಿದೆ.

ಐಟಿ, ಹಣಕಾಸು ಹಾಗೂ ಬಿಪಿಓ ಸಂಸ್ಥೆಗಳನ್ನೂ ಕೂಡ ನಾಲ್ಕು ಹಂತಗಳಲ್ಲಿ ಪುನರಾಂಭಿಸಲು ಅವಕಾಶ ಕಲ್ಪಿಸಬಹುದು. ಮೊದಲ ಹಂತದಲ್ಲಿ ಕೇವಲ 25% ಸಿಬ್ಬಂಧಿಗಳು ಕಚೇರಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಲು ಸೂಚಿಸಬಹುದು. ಎರಡನೇ ವಾರ ಶೇ.50, ಮೂರನೇ ವಾರ ಶೇ.75 ಹಾಗೂ ಒಂದು ತಿಂಗಳು ಪೂರ್ಣವಾಗುತ್ತಲೇ ಎಲ್ಲಾ ಸಿಬ್ಬಂಧಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಕಚೇರಿಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದ್ರೆ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸೋ ಸಾಧ್ಯತೆಯಿರೋದ್ರಿಂದಾಗಿ ಲಾಕ್ ಡೌನ್ ಅವಧಿ ಮುಗಿದ ಮತ್ತೆ ಒಂದು ತಿಂಗಳ ಬಳಿಕ ಆರಂಭಿಸಬಹುದು ಎನ್ನಲಾಗುತ್ತಿದೆ. ಒಂದೆಡೆ ಕೊರೊನಾ ಸೋಂಕು ಹರಡುತ್ತಿದ್ರೆ, ಇನ್ನೊಂದೆಡೆ ಲಾಕ್ ಡೌನ್ ಅವಧಿ ಮುಕ್ತಾಯವಾಗುತ್ತಿದೆ. ಲಾಕ್ ಡೌನ್ ಅವಧಿಯ ನಂತರ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆನ್ನುವ ಕುರಿತು ಕೇಂದ್ರ ಸರಕಾರ ಗಂಭೀರ ಚಿಂತನೆಯನ್ನು ನಡೆಸುತ್ತಿದೆ.

Leave A Reply

Your email address will not be published.