ಲಾಕ್ ಡೌನ್ ವಿರೋಧಿಸಿ ಉಗುಳಿದ್ದಕ್ಕೆ ‘ಗಲ್ಲು ಶಿಕ್ಷೆ’ ವಿಧಿಸಿದ ಸೌದಿಅರೇಬಿಯಾ !

0

ಸೌದಿಅರೇಬಿಯಾ : ಕೊರೊನಾ ವೈರಸ್ ವಿರುದ್ದ ಭಾರತ ಮಾತ್ರವಲ್ಲ ವಿಶ್ವದ 170ಕ್ಕೂ ಅಧಿಕ ರಾಷ್ಟ್ರಗಳು ಹೋರಾಟ ನಡೆಸುತ್ತಿವೆ. ಭಾರತ 21 ದಿನಗಳ ಲಾಕ್ ಡೌನ್ ಘೋಷಿಸಿ ಜನರನ್ನು ಮನೆಯಿಂದ ಹೊರ ಬರಬಾರೆಂದು ಮನವಿ ಮಾಡುತ್ತಿದೆ. ವ್ಯಾಪಾರವಹಿವಾಟು, ವಾಹನ ಸಂಚಾರ ಸ್ಥಬ್ದಗೊಂಡಿದೆ. ಅದ್ರಲ್ಲೂ ಸೌದಿ ಅರೇಬಿಯಾದಲ್ಲಿ ಕೊರೊನಾ ವಿರುದ್ದದ ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಲಾಕ್ ಡೌನ್ ವಿರೋಧಿಸಿ ಉಗುಳಿದ ತಪ್ಪಿಗೆ ವ್ಯಕ್ತಿಯೋರ್ವನಿಗೆ ಗಲ್ಲು ಶಿಕ್ಷೆಯಾಗೋ ಸಾಧ್ಯತೆಯಿದೆ.

ಅರಬ್ ರಾಷ್ಟ್ರವಾಗಿರೋ ಸೌದಿ ಅರೇಬಿಯಾದಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಭಾರತದಂತೆಯೇ ಸೌದಿ ಅರೇಬಿಯಾ ಕೂಡ ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿ ಹೋಗಿದೆ. ಸೌದಿ ಅರೇಬಿಯಾದಲ್ಲಿ ಒಟ್ಟು 2000 ಅಧಿಕ ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಸೌದಿ ಅರೇಬಿಯಾ ಲಾಕ್ ಡೌನ್ ಹೇರಿದೆ. ಎರಡು ನಗರಗಳ ಎಲ್ಲಾ ಭಾಗಗಳಲ್ಲಿ ಕರ್ಫ್ಯೂ ಪರಿಣಾಮಕಾರಿಯಾಗಲಿದ್ದು, ಪ್ರವೇಶ ಮತ್ತು ನಿರ್ಗಮನದ ಮೇಲೆ ನಿರ್ಬಂಧ ಹೇರಲಾಗಿದೆ.

ಪ್ರವೇಶ ಮತ್ತು ನಿರ್ಗಮನ ನಿರ್ಬಂಧಗಳು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳನ್ನು ಒಳಗೊಂಡಿರುವುದಿಲ್ಲ, ಕರ್ಫ್ಯೂ ಸಮಯದಲ್ಲಿ ಅಗತ್ಯ ಸೌಲಭ್ಯಗಳಿಗೆ ಬೇಕಾದ ಎಲ್ಲಾ ವಲಯದ ಸಿಬ್ಬಂದಿಗಳಿಗೆ ಇದು ಅನ್ವಯಿಸುವುದಿಲ್ಲ. ಬೆಳಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಮಾತ್ರವೇ ಅಗತ್ಯವಸ್ತುಗಳನ್ನು ಕೊಳ್ಳಲು ಅವಕಾಶ ಕಲ್ಪಿಸಿದೆ. ನಂತರ ಮನೆಯಿಂದ ಹೊರ ಬಂದವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸೌದಿ ಅರೇಬಿಯಾದ ವಾಯುವ್ಯ ಪ್ರಾಂತ್ಯದ ಹೇಲ್ ಪ್ರದೇಶದಲ್ಲಿರುವ ಮಾಲ್ ನ ಶಾಪಿಂಗ್ ಟ್ರಾಲಿಯಲ್ಲಿ ವ್ಯಕ್ತಿಯೋರ್ವ ಉಗುಳುವಾಗ ಸಿಕ್ಕಿಬಿದ್ದಿದ್ದಾನೆ. ವ್ಯಕ್ತಿ ಉಗುಳುತ್ತಿರೋದನ್ನು ಕಂಡ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆತ ಯಾವ ಉದ್ದೇಶಕ್ಕೆ ಉಗುಳಿದ್ದಾನೆ ಅನ್ನೋ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಒಂದೊಮ್ಮೆ ಆತ ಕೊರೊನಾ ಸೋಂಕು ಹರಡುವ ಉದ್ದೇಶದಿಂದಲೋ, ಇಲ್ಲಾ ಲಾಕ್ ಡೌನ್ ವಿರೋಧಿಸಿ ಉಗುಳಿದ್ದರೆ ಆತನಿಗೆ ಗಲ್ಲು ಶಿಕ್ಷೆ ವಿಧಿಸೋ ಸಾಧ್ಯತೆಯಿದೆ ಅಂತಾ ಸೌದಿ ಅರೇಬಿಯಾದ ಸುದ್ದಿವಾಹಿನಿ ಗಲ್ಪ್ ನ್ಯೂಸ್ ವರದಿ ಮಾಡಿದೆ.

ಮಾಲ್ ನ ಶಾಂಪಿಂಗ್ ಟ್ರಾಲಿಯಲ್ಲಿ ಉಗುಳಿರೋದನ್ನು ಸೌದಿ ಅರೇಬಿಯಾದಲ್ಲಿ ಧಾರ್ಮಿಕ ಹಾಗೂ ಕಾನೂನಾತ್ಮಕವಾಗಿ ಖಂಡಿಸಲಾಗುತ್ತಿದೆ. ಈತನ ಕೃತ್ಯವನ್ನು ಮೇಜರ್ ಕ್ರೈಂ ಅಂತಾನೇ ಪರಿಗಣಿಸಲಾಗುತ್ತಿದೆ. ಉದ್ದೇಶ ಪೂರ್ವಕವಾಗಿಯೇ ವ್ಯಕ್ತಿ ಸಮಾಜದಲ್ಲಿ ಸಾಂಕ್ರಾಮಿಕ ರೋಗವನ್ನು ಹರಡಲು ಯತ್ನಿಸುತ್ತಿದ್ದಾನೆ. ಈ ಮೂಲಕ ಜನರಲ್ಲಿ ಭಯವನ್ನು ಉಂಟು ಮಾಡುತ್ತಿದ್ದಾನೆ ಅಂತಾನೆ ಪರಿಗಣಿಸಲಾಗುತ್ತದೆ. ಈತ ಮಾಡಿರೋ ಕೃತ್ಯಕ್ಕೆ ಮರಣದಂಡನೆ ವಿಧಿಸೋ ಸಾಧ್ಯತೆಯಿದೆ.

Leave A Reply

Your email address will not be published.