ನಾಳೆ ಓಪನ್ ಆಗೋದಿಲ್ಲಾ ದೇವಸ್ಥಾನ, ಚರ್ಚ್, ಮಸೀದಿ : ರಾಜ್ಯ ಸರಕಾರದ ಹೊಸ ಮಾರ್ಗಸೂಚಿಯಲ್ಲೇನಿದೆ ಗೊತ್ತಾ ?

0

ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ 5.0 ಜಾರಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆಯಿಂದ ತೆರೆಯಲು ಉದ್ದೇಶಿಸಿರುವ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳನ್ನು ತೆರೆಯಲು ಅವಕಾಶ ನೀಡದಿರಲು ರಾಜ್ಯ ಸರಕಾರ ನಿರ್ಧರಿಸಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯ ಅನ್ವಯ ಜೂನ್ 8ರಿಂದ ದೇವಸ್ಥಾನ, ಚರ್ಚ್, ಮಸೀದಿ, ಹೋಟೆಲ್, ಮಾಲ್ ಗಳನ್ನು ತೆರೆಲು ರಾಜ್ಯ ಸರಕಾರ ಮುಂದಾಗಿದೆ.

ರಾಜ್ಯದಲ್ಲಿಯೂ ರಾತ್ರಿ ಕರ್ಪ್ಯೂ ಅವಧಿಯನ್ನು ಕಡಿತಗೊಳಿಸಿದ್ದು, ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರವೇ ರಾತ್ರಿ ಕರ್ಪ್ಯೂ ಆಚರಿಸಲು ನಿರ್ಧಾರ ಕೈಗೊಂಡಿದೆ. ನಾಳೆಯಿಂದ ರಾಜ್ಯದ ದೇವಸ್ಥಾನಗಳು ತೆರೆಯಲಿವೆ. ಆದರೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಕೇವಲ ಅರ್ಚಕರು ಮಾತ್ರವೇ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸಬಹುದು. ಇನ್ನು ದೇವಸ್ಥಾನ ಆರಂಭವಾದ ನಂತರ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು, ಮುಖಕ್ಕೆ ಮಾಸ್ಕ್ ಧರಿಸಿಯೇ ದೇವರ ದರ್ಶನ ಪಡೆಯಬೇಕು. ಇನ್ನು ದೇವರನ್ನು ಮುಟ್ಟಿ ದರ್ಶನ ಪಡೆಯೋದಕ್ಕೆ ನಿಷೇಧವನ್ನು ಹೇರಲಾಗಿದೆ.

ಇನ್ನು ಮದುವೆ ಹಾಗೂ ಅಂತ್ಯಕ್ರಿಯೆ ನಡೆಸುವುದಕ್ಕೆ ಷರತ್ತುಬದ್ದ ಅನುಮತಿಯನ್ನು ನೀಡಲಾಗಿದೆ. ಪ್ರಮುಖವಾಗಿ ಮದುವೆ ಸಮಾರಂಭಗಳಿಗೆ ಈ ಹಿಂದಿನಂತೆಯೇ 50 ಮಂದಿಯಷ್ಟೇ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸರಕಾರದ ಮಾರ್ಗಸೂಚಿಯನ್ನು ಪಾಲಿಸಲೇ ಬೇಕು. ಮಾತ್ರವಲ್ಲ ಅಂತ್ಯಕ್ರೀಯೆ ನಡೆಸುವುದಕ್ಕೆ ಕೇವಲ 20 ಜನರಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಯಾವುದೇ ರೀತಿಯಲ್ಲಿಯೂ ಸಡಿಲಿಕೆಯನ್ನು ನೀಡದಿರಲು ರಾಜ್ಯ ಸರಕಾರ ತೀರ್ಮಾನಿಸಿದೆ.

ರಾಜ್ಯದಲ್ಲಿ ಕೈಗಾರಿಕೆ ಹಾಗೂ ಕಂಪೆನಿಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶವನ್ನು ಕಲ್ಪಿಸಿರುವ ರಾಜ್ಯ ಸರಕಾರ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ ರಾಜ್ಯ ಸರಕಾರ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಖಡಕ್ ಆದೇಶ ಹೊರಡಿಸಿದೆ. ಅಲ್ಲದೇ ಕಂಪೆನಿಗಳು ಹೆಚ್ಚು ವರ್ಕ್ ಫ್ರಂ ಹೋಮ್ ನಡೆಸಲು ಸೂಚನೆಯನ್ನು ನೀಡಿದೆ.

ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆಯನ್ನು ಮಾಡಿದ್ದರು ಕೂಡ ಶಾಲಾ, ಕಾಲೇಜು, ಟ್ಯೂಷನ್ ಸೆಂಟರ್ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳನ್ನು ಸದ್ಯಕ್ಕೆ ಓಪನ್ ಮಾಡದಿರಲು ತೀರ್ಮಾನಿಸಿದ್ದು, ಅಗಸ್ಟ್ ನಂತರವೇ ಶಾಲೆಗಳನ್ನು ತೆರೆಯುವ ಕುರಿತು ರಾಜ್ಯ ಸರಕಾರ ಚಿಂತನೆಯನ್ನು ನಡೆಸಿದೆ. ಮುಖ್ಯವಾಗಿ ರಾಜ್ಯಸರಕಾರ ಮೆಟ್ರೋ ಸಂಚಾರ, ಅಂತರಾಷ್ಟ್ರೀಯ ವಿಮಾನ ಸೇವೆ, ಸಿನಿಮಾ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್, ಆಡಿಟೋರಿಯಂ ಪಾರ್ಕ್, ಮನೋರಂಜನಾ ಪಾರ್ಕ್, ಕ್ರೀಡೆ, ಸಾಂಸ್ಕೃತಿಕ, ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.

Leave A Reply

Your email address will not be published.