ಬುಧವಾರ, ಜೂನ್ 18, 2025
HomeBreakingಬಂಟ್ವಾಳದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ : ಕರಾವಳಿಯಲ್ಲಿ ಶುರುವಾಯ್ತು ಆತಂಕ

ಬಂಟ್ವಾಳದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ : ಕರಾವಳಿಯಲ್ಲಿ ಶುರುವಾಯ್ತು ಆತಂಕ

- Advertisement -

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊರ್ವ ಮಹಿಳೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಬಂಟ್ವಾಳದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪಕ್ಕದ ಮನೆಯ ವೃದ್ದೆಗೆ ಕೊರೊನಾ ಸೋಂಕು ಕಾಣಸಿಕೊಂಡಿತ್ತು, ಇದೀಗ ವೃದ್ದ ಮಹಿಳೆಯ 33 ವರ್ಷದ ಮಗಳಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

Bcg And Corona

ಮಹಿಳೆಯನ್ನು ಎಪ್ರಿಲ್ 19 ರಿಂದಲೇ ಮಂಗಳೂರಿನ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಮಹಿಳೆಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.

Alvas1

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಸಬಾದಲ್ಲಿ ಇದುವರೆಗೆ ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Corona Isolation Ward

ಎ.19ರಂದು ಮೊದಲ ಮಹಿಳೆ ಸಾವನ್ನಪ್ಪಿದ್ದರೆ, ಆಕೆಯ ಅತ್ತೆ ಎಪ್ರಿಲ್ 23 ರಂದು ಕೊರೊನಾಕ್ಕೆ ಬಲಿಯಾಗಿದ್ದಾರೆ. ಇದೀಗ ಅಕ್ಕಪಕ್ಕದ ಮನೆಗೂ ಕೊರೊನಾ ಸೋಂಕು ವ್ಯಾಪಿಸುತ್ತಿರೋದು ಆತಂಕ ಮೂಡಿಸಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular