ಕರಾವಳಿಯಲ್ಲಿ ಕೊರೊನಾ ರೌದ್ರನರ್ತನ : ದ.ಕ. 16, ಉಡುಪಿಯಲ್ಲಿ 5 ಮಂದಿಗೆ ಸೋಂಕು

0

ಮಂಗಳೂರು : ಕರಾವಳಿಯಲ್ಲಿ ಕೊರೊನಾ ರಣಕೇಕೇ ಹಾಕಿದೆ. ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ರೆ, ಗ್ರೀನ್ ಝೋನ್ ಉಡುಪಿಯಲ್ಲಿ 5 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ. ವಿದೇಶಗಳಿಂದ ಆಗಮಿಸಿದ್ದ ಜನರ ಪೈಕಿ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಆತಂಕವನ್ನು ತಂದೊಡ್ಡಿದೆ.

ಮೇ 12ರಂದು ಉಡುಪಿ ಜಿಲ್ಲೆಗೆ ವಿದೇಶಗಳಿಂದ ಆಗಮಿಸಿದ್ದ 49 ಮಂದಿಯ ಪೈಕಿ 5 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ, ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ 123 ಮಂದಿ ವಿದೇಶಿಗರ ಪೈಕಿ 16 ಮಂದಿಗೆ ಕೊರೊನಾ ಸೋಂಕು ಖಚಿತವಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ ಅರ್ಧಶತಕ ತಲುಪಿದೆ.

ಇನ್ನು ಕೊರೊನಾ ಮುಕ್ತವಾಗಿ ಗ್ರೀನ್ ಝೋನ್ ನಲ್ಲಿರುವ ಉಡುಪಿಯಲ್ಲೀಗ 47 ದಿನಗಳ ನಂತರ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಕರಾವಳಿಯಲ್ಲೀಗ ಆತಂಕ ಶುರುವಾಗಿದೆ. ವಿದೇಶಗಳಿಂದ ವಾಪಾಸಾಗಿದ್ದ ಎಲ್ಲರನ್ನೂ ಕೂಡ ಜಿಲ್ಲಾಡಳಿತಗಳು ಕ್ವಾರಂಟೈನ್ ಗೆ ಒಳಪಡಿಸಿವೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಕುರಿತು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಹೇಳಿದ್ದೇನು ಗೊತ್ತಾ ?

https://youtu.be/eoXP3Nslyls
Leave A Reply

Your email address will not be published.