ರಾಜ್ಯದಲ್ಲಿ 11 ಸಾವಿರಕ್ಕೇರಿದ ಕೊರೊನಾ ಸೋಂಕು : ಬೆಂಗಳೂರು144, ದ.ಕ 33 ಮಂದಿಗೆ ವೈರಸ್ ದೃಢ

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದೆ. ಇಂದು ಒಂದೇ ದಿನ 445 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೊರೊನಾ ಸೋಂಕಿತರ ಸಂಖ್ಯೆ 11 ಸಾವಿರಕ್ಕೆ ಏರಿಕೆಯಾಗಿದೆ. ಮಾತ್ರವಲ್ಲ ಇಂದು ಒಂದೇ ದಿನ 10 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಸಾವಿನಪ್ಪಿದವರ ಸಂಖ್ಯೆ 180ಕ್ಕೆ ಏರಿಕೆ ಕಂಡಿದೆ.

ಸಿಲಿಕಾನ್ ಸಿಟಿ ಬೆಂಗಳೂರನ್ನು ಕೊರೊನಾ ಮಹಾಮಾರಿ ಬಿಟ್ಟು ಬಿಡದಂತೆ ಕಾಡುತ್ತಿದೆ. ಬೆಂಗಳೂರಲ್ಲಿ ಇಂದೂ ಕೂಡ ಕೊರೊನಾ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದ್ದು, ಒಂದೇ ದಿನ 144 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 1935ಕ್ಕೆ ಏರಿಕೆಯಾಗಿದ್ದು, 2 ಸಾವಿರದ ಗಡಿದಾಟುವ ಆತಂಕ ಎದುರಾಗಿದೆ. ಮಾತ್ರವಲ್ಲ ಬೆಂಗಳೂರಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಇದುವರೆಗೆ 81 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ಜಿಂದಾಲ್ ಕಾರ್ಖಾನೆ ಬಳ್ಳಾರಿಗೆ ಆತಂಕವನ್ನು ತಂದೊಡ್ಡಿದೆ. ಬಳ್ಳಾರಿಯಲ್ಲಿಂದು 47 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 602ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇಂದೂ ಕೂಡ ಜಿಲ್ಲೆಯಲ್ಲಿ ಹೊಸದಾಗಿ 42 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇಷ್ಟು ದಿನ ಸೇಫ್ ಜಿಲ್ಲೆಯ ಸಾಲಿನಲ್ಲಿದ್ದ ಕೊಪ್ಪಳ ಜಿಲ್ಲೆಗೆ ಇಂದು ಕೊರೊನಾ ಆಘಾತವನ್ನು ನೀಡಿದೆ. ಇಂದು ಜಿಲ್ಲೆಯಲ್ಲಿ 36 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕರಾವಳಿ ಜಿಲ್ಲೆಗಳಲ್ಲಿಯೂ ಕೊರೊನಾ ಆರ್ಭಟ ಮುಂದುವರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದಲೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಬರೋಬ್ಬರಿ 33 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 519 ಕ್ಕೆ ಏರಿಕೆಯನ್ನು ಕಂಡಿದೆ. ಉಳಿದಂತೆ ಧಾರವಾಡದಲ್ಲಿ 30, ರಾಯಚೂರು 14, ಗದಗ 12, ಚಾಮರಾಜನಗರ 11, ಉಡುಪಿ 9, ಯಾದಗಿರಿ 7, ಮಂಡ್ಯ 6, ಉತ್ತರ ಕನ್ನಡ 6, ಬಾಗಲಕೋಟೆ 6, ಶಿವಮೊಗ್ಗ 6, ಕೋಲಾರ 6, ಮೈಸೂರು 5 ಮಂದಿಗೆಗೆ ಕಾಣಿಸಿಕೊಂಡಿದೆ.

ಚಿಕ್ಕಮಗಳೂರು 4, ಕೊಡಗು 4, ಹಾಸನ 3, ಬೆಂಗಳೂರು ಗ್ರಾಮಾಂತರ 3, ವಿಜಯಪುರ 2, ತುಮಕೂರು 2, ಹಾವೇರಿ 2, ಬೀದರ್ 1, ಬೆಳಗಾವಿ 1, ದಾವಣಗೆರೆ 1, ರಾಮನಗರ 1, ಚಿತ್ರದುರ್ಗ ಜಿಲ್ಲೆಯಲ್ಲಿ ಓರ್ವರಿಗೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.