ಬೆಂಗಳೂರು 32, ದ.ಕ. 14, ಉಡುಪಿ 13 : ರಾಜ್ಯದಲ್ಲಿಂದು ಕೊರೊನಾ ವೈರಸ್ ಸ್ಪೋಟ

0

ಬೆಂಗಳೂರು : ರಾಜ್ಯದಲ್ಲಿಂದು ಮತ್ತೆ ಕೊರೊನಾ ಸೋಂಕು ಶತಕದ ಗಡಿದಾಟಿದೆ. ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಕೊರೊನಾ ಶಾಕ್ ಕೊಟ್ಟಿದೆ. ರಾಜ್ಯದಲ್ಲಿಂದು ಬರೊಬ್ಬರಿ 141 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ಇಂದು ಬರೋಬ್ಬರಿ 13 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರರ ಸಂಖ್ಯೆ 336ಕ್ಕೆ ಏರಿಕೆಯಾಗಿದೆ. ಇನ್ನು ಕಳೆದೊಂದು ವಾರದಿಂದಲೂ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ನಲುಗಿರುವ ಯಾದಗಿರಿ ಜಿಲ್ಲೆಯಲ್ಲಿಯೂ ಇಂದು ಕೂಡ 18 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೋಂಡಿದೆ. ಕರಾವಳಿ ಜಿಲ್ಲೆಗಳನ್ನೂ ಕೊರೊನಾ ಮಹಾಮಾರಿ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ ಉಡುಪಿಯಲ್ಲಿ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಯಲ್ಲಿ ಒಟ್ಟು ಸೋಂಕಿತರರ ಸಂಖ್ಯೆ 111ಕ್ಕೆ ಏರಿಕೆಯಾದ್ರೆ ಉಡುಪಿಯಲ್ಲಿ 177ಕ್ಕೆ ಏರಿಕೆಯಾಗಿದೆ.

ಉಳಿದಂತೆ ಹಾಸನ ಜಿಲ್ಲೆಯಲ್ಲಿ 13, ವಿಜಯಪುರ 11, ಬೀದರ್ 10, ಶಿವಮೊಗ್ಗ 6, ದಾವಣಗೆರೆ 4, ಹಾವೇರಿ 4, ಕೋಲಾರ 3, ಕಲಬುರಗಿ 2, ಮೈಸೂರು 2, ಉತ್ತರ ಕನ್ನಡ 2, ಧಾರವಾಡ 2, ಬೆಂಗಳೂರು ಗ್ರಾಮಾಂತರ 1, ತುಮಕೂರು 1, ಚಿತ್ರದುರ್ಗ 1 ಹಾಗೂ ಬೆಳಗಾವಿಯಲ್ಲಿ ಓರ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

141 ಮಂದಿ ಕೊರೊನಾ ಪೀಡಿತರರ ಪೈಕಿ 90ಕ್ಕೂ ಅಧಿಕ ಮಂದಿ ಹೊರ ರಾಜ್ಯಗಳಿಂದ ಬಂದವರೇ ಆಗಿದ್ದಾರೆ. ಅಲ್ಲದೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪತ್ತೆಯಾಗಿರುವ ಸುಮಾರು 20 ಪ್ರಕರಣಗಳ ಕೊರೊನಾ ಮೂಲವೇ ನಿಗೂಢವಾಗಿದೆ.

ಮಾತ್ರವಲ್ಲ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದಿದ್ದು, ಬೀದರ್ ಜಿಲ್ಲೆಯಲ್ಲಿ 47 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮೇ 24 ರಂದು ಪಾರ್ಶ್ವವಾಯು ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಮೇ 28ರಂದು ಸಾವನ್ನಪ್ಪಿದ್ದಾರೆ. ಇದೀಗ ವರದಿಯಲ್ಲಿ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.