ಕೊರೊನಾ ವೈರಸ್ ಎಫೆಕ್ಟ್ : ಮಾರ್ಚ್ 31ರ ವರೆಗೆ ಶಾಲೆಗಳಿಗೆ ರಜೆ

0

ನವದೆಹಲಿ : ಕೊರೊನಾ ವೈರಸ್ ಭೀತಿಗೆ ವಿಶ್ವವೇ ಬೆಚ್ಚಿಬಿದ್ದಿದೆ. ಭಾರತದಲ್ಲಿಯೂ ಕೊರೊನಾ ವೈರಸ್ ಶಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಅದ್ರಲ್ಲೂ ರಾಷ್ಟ್ರರಾಜಧಾನಿ ದೆಹಲಿಯಲ್ಲಿಯೂ ಕೊರೊನಾ ಭೀತಿ ಆವರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರಕಾರ ಶಾಲೆಗಳಿಗೆ ಇಂದಿನಿಂದ ಮಾರ್ಚ್ 31ರ ವರೆಗೆ ರಜೆ ಘೋಷಿಸಿದೆ.

ದೆಹಲಿಯ ನೊಯ್ಡಾ, ಫರೀದಾಬಾದ್, ಗಾಜಿಯಾಬಾದ್ ಪ್ರದೇಶಗಳಲ್ಲಿ ಈ ಹಿಂದೆಯೇ ರಜೆ ನೀಡಲಾಗಿತ್ತು. ಅಲ್ಲದೇ ಪೋಷಕರು ಕೂಡ ಕೊರೊನಾ ಭಯದಿಂದ ಶಾಲೆಗಳಿಗೆ ರಜೆ ನೀಡುವಂತೆ ಸರಕಾರವನ್ನು ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ದೆಹಲಿಯ ಸರಕಾರಿ, ಅನುದಾನಿತ, ಖಾಸಗಿ, ಎಂಎಸ್ ಡಿ ಸೇರಿದಂತೆ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಿದೆ. ಇನ್ನು ಸಿಬಿಎಸ್ ಸಿ ಪರೀಕ್ಷೆಗಳನ್ನು ಮುಂದೂಡಲು ಕೂಡ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

Leave A Reply

Your email address will not be published.