339 ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

0

ರಾಜ್ಯ ಅರಣ್ಯ ಇಲಾಖೆಯ 11 ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ ಅರಣ್ಯ ರಕ್ಷಕ (ಫಾರೆಸ್ಟ್ ಗಾರ್ಡ್) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಒಟ್ಟು 339 ಹುದ್ದೆಗಳಿಗೆ ನೇಮಕ ನಡೆಯಲಿದ್ದು. ಆಸಕ್ತ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :

ಬೆಳಗಾವಿ ವೃತ್ತ :21
ಬೆಂಗಳೂರು ವೃತ್ತ : 45
ಬಳ್ಳಾರಿ ವೃತ್ತ : 15
ಚಾಮರಾಜನಗರ ವೃತ್ತ : 35
ಚಿಕ್ಕಮಗಳೂರು ವೃತ್ತ : 10
ಧಾರವಾಡ ವೃತ್ತ : 13
ಕೆನರಾ ವೃತ್ತ : 82
ಮಂಗಳೂರು ವೃತ್ತ : 15
ಮೈಸೂರು ವೃತ್ತ: 19
ಶಿವಮೊಗ್ಗ ವೃತ್ತ : 52

ವೇತನ ಶ್ರೇಣಿ : 21,4000 -42,000 ರೂ. 
ವಿದ್ಯಾರ್ಹತೆ : 

ದ್ವಿತೀಯಾ ಪಿಯುಸಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು (ಅಧಿಸೂಚನೆಯ ದಿನಾಂಕದೊಳಗೆ ವಿದ್ಯಾರ್ಹತೆಯನ್ನು ಪಡೆದಿರಬೇಕು)

ದೈಹಿಕ ಸಾಮರ್ಥ್ಯ : 

ಪುರುಷ ಅಭ್ಯರ್ಥಿಗಳು 163 ಸೆಂ.ಮೀ ಎತ್ತರ ಎದೆ ಅಳತೆ 79 ಸೆಂ.ಮೀ. (ಕನಿಷ್ಟ ಹಿಗ್ಗುವಿಕೆ 5 ಸೆಂ.ಮೀ.)
ಮಹಿಳಾ ಅಭ್ಯರ್ಥಿಗಳು ಕನಿಷ್ಟ 150 ಸೆಂ.ಮೀ. ಎತ್ತರ, 40 ಕೆ.ಜಿ. ತೂಕ ಹೊಂದಿರಬೇಕು.

ವಯೋಮಿತಿ :

ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ (ಎಸ್ ಸಿ/ಎಸ್ ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.)
ಅರಣ್ಯ ಪ್ರೇಕ್ಷಕರಾಗಿ ಅರಣ್ಯ ಇಲಾಖೆಯಲ್ಲಿ 5 ವರ್ಷ ಸೇವೆ ಸಲ್ಲಿಸಿದ ಅಭ್ಯರ್ಥಿಗಳೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ :

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ.
ಎಸ್.ಸಿ/ಎಸ್.ಟಿ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 25 ರೂ. ಎಲ್ಲಾ ಅಭ್ಯರ್ಥಿಗಳು 20 ರೂಪಾಯಿ ಸೇವಾ ಶುಲ್ಕ ಪಾವತಿಸಬೇಕು.

ನೇಮಕಾತಿ :

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆಯಲ್ಲಿ ಪಡೆದ ಶೇಕಡಾವಾರು ಅಂಕ, ಮೆರಿಟ್ ಆಧಾರದಲ್ಲಿ ವೃತ್ತವಾರು 1 :20 ಅನುಪಾತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಮಾರ್ಚ್ 16
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 15
ಅರ್ಜು ಶುಲ್ಕ ಪಾವತಿಗೆ ಕೊನೆಯ ದಿನಾಂಕ : ಎಪ್ರಿಲ್ 17
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ : 9632320817

ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ : https://www.aranya.gov.in/

Leave A Reply

Your email address will not be published.