ದ.ಕ. 11, ಉಡುಪಿ 9, ಕಲಬುರಗಿ 28 : ರಾಜ್ಯದಲ್ಲಿಂದು 122 ಮಂದಿಗೆ ಕೊರೊನಾ

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಅಬ್ಬರ ಮುಂದುವರಿಸಿದೆ. ಇಂದೂ ಕೂಡ ರಾಜ್ಯದಲ್ಲಿ 122 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಬರೋಬ್ಬರಿ 28 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಹಾಗೂ ಉಡುಪಿ ಜಿಲ್ಲೆಯಲ್ಲಿ 8 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 2,405ಕ್ಕೆ ಏರಿಕೆಯಾಗಿದೆ.

ಕರಾವಳಿ ಜಿಲ್ಲೆಗಳನ್ನು ಕೊರೊನಾ ಸೋಂಕು ನಿರಂತರವಾಗಿ ಕಾಡುತ್ತಲೇ ಇದೆ. ಇಂದೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಉಡುಪಿ ಜಿಲ್ಲೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಾತ್ರವಲ್ಲ ಉತ್ತರ ಕನ್ನಡ ಜಿಲ್ಲೆಯಲ್ಲಿಂದು 6 ಮಂದಿ ಕೊರೊನಾ ಮಹಾಮಾರಿ ಒಕ್ಕರಿಸಿಕೊಂಡಿದೆ.

ಕಲಬುರಗಿಯಲ್ಲಿ 28, ಯಾದಗಿರಿಯಲ್ಲಿ 16, ಹಾಸನ ಜಿಲ್ಲೆಯಲ್ಲಿ 15, ಬೀದರ್ 12, ದಕ್ಷಿಣ ಕನ್ನಡ 11, ಉಡುಪಿ 9, ಬೆಂಗಳೂರು 6, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಚಿಕ್ಕಮಗಳೂರು 3, ರಾಯಚೂರು 5, ಬೆಂಗಳೂರು ಗ್ರಾಮಾಂತರ 2, ವಿಜಯಪುರ 2 ಮತ್ತು ಬಳ್ಳಾರಿ, ಮಂಡ್ಯ ಹಾಗೂ ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿಂದು ಪತ್ತೆಯಾಗಿರುವ 122 ಕೊರೊನಾ ಪ್ರಕರಣಗಳ ಪೈಕಿ 108 ಮಂದಿ ಮುಂಬೈನಿಂದ ಬಂದವರೇ ಆಗಿದ್ದಾರೆ. ಅಲ್ಲದೇ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಆವರಿಸಿದೆ. ಅದರಲ್ಲೂ ಇಂದು ಒಂದೇ ದಿನ 10 ವರ್ಷದೊಳಗಿನ 17 ಮಕ್ಕಳಿಗೆ ಕೊರೊನಾ ಸೋಂಕು ಒಕ್ಕರಿಸಿದೆ.

ಇನ್ನು ಮಹಾಮಾರಿ ಕೊರೊನಾಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 69 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ 762 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ .

Leave A Reply

Your email address will not be published.