ಕೊರೊನಾ ವೈರಸ್ ಭೀತಿ : ಇಂದಿನಿಂದ ರಾಜ್ಯದ ಶಾಲೆಗಳಿಗೆ ರಜೆ

0

ಬೆಂಗಳೂರು : ದಿನೇ ದಿನೇ ಹೆಚ್ಚುತ್ತಿರೋ ಕೊರೊನಾ ವೈರಸ್ ಭೀತಿಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಗ್ರಾಮಾಂತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ವ್ಯಾಪ್ತಿಯ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪೂರ್ವ ಪ್ರಾಥಮಿಕ (ನರ್ಸರಿ, ಎಲ್ ಕೆಜಿ ಮತ್ತು ಯುಕೆಜಿ) ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಬೆಂಗಳೂರಿನ ಆರೋಗ್ಯ ಆಯುಕ್ತರ ಸಲಹೆಯ ಮೇರೆಗೆ ರಜೆ ಘೋಷಿಸಲಾಗಿದೆ. ಇಂದಿನಿಂದಲೇ ರಜೆ ನೀಡಲಾಗಿದ್ದು, ಮುಂದಿನ ಆದೇಶದ ವರೆಗೂ ರಜೆ ಮುಂದುವರಿಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.