ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನ ತಕ್ಷಣಕ್ಕೆ ಕರೆತರಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

0

ನವದೆಹಲಿ : ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ತಕ್ಷಣಕ್ಕೆ ಭಾರತಕ್ಕೆ ಕರೆಯಿಸಿಕೊಳ್ಳಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಯುಎಇಯಲ್ಲಿ ತನ್ನ ದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ವಾಪಾಸ್ ಕರೆಯಿಸಿಕೊಳ್ಳುವಂತೆ ಯುಎಇ ಭಾರತಕ್ಕೆ ಎಚ್ಚರಿಕೆಯನ್ನು ನೀಡಿತ್ತು.

ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೋವಿಡ್ -19 ಸೋಂಕು ದೇಶದಲ್ಲಿ ನಿಯಂತ್ರಣಕ್ಕೆ ಬರುವರೆಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇನ್ನು ಭಾರತದಲ್ಲಿರುವ ವಿದೇಶಿ ಪ್ರಜೆಗಳ ವೀಸಾ ಅವಧಿಯನ್ನು ಭಾರತೀಯ ಗೃಹ ಸಚಿವಾಲಯದ ತೀರ್ಪಿನ ನಂತರ ಸುಪ್ರೀಂ ಕೋರ್ಟ್ ವಿಸ್ತರಣೆ ಮಾಡಿದೆ. ವಿದೇಶಿ ಪ್ರಜೆಗಳ ನಿಯಮಿತ ವೀಸಾ, ಇ-ವೀಸಾ ಹಾಗೂ ವಾಸ್ತವ್ಯದ ಷರತ್ತುಗಳ ವೀಸಾ ಅವಧಿಯನ್ನು ಎಪ್ರಿಲ್ 30ರ ಮಧ್ಯರಾತ್ರಿಯವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

Leave A Reply

Your email address will not be published.