ನೀವಿಲ್ಲದೇ ನಾ ಬದುಕುವುದಾದರೂ ಹೇಗೆ…?! ಕಲ್ಲು ಹೃದಯದಲ್ಲೂ ಕಣ್ಣೀರು ತರಿಸುವ ಭಾವುಕ ಪತ್ರ…!!

ಕೊರೋನಾ ಎರಡನೇ ಅಲೆ ಜನಜೀವನವನ್ನು ಅಕ್ಷರಷಃ ನರಕವಾಗಿಸಿದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡು ಕಣ್ಣೀರಿಡುವುದಕ್ಕೂ ಅವಕಾಶವಿಲ್ಲದಂತ ಯಾತನಾಮಯ ಸ್ಥಿತಿಯನ್ನು ಸೋಂಕು ಸೃಷ್ಟಿಸಿದೆ. ಒಂದೇ ವಾರದಲ್ಲಿ ಅಕ್ಕ ಹಾಗೂ ಅಮ್ಮನನ್ನು ಕಳೆದುಕೊಂಡ ಮಹಿಳಾ ಕ್ರಿಕೆಟರ್ ವೇದಾಕೃಷ್ಣಮೂರ್ತಿ ಈ ಸಂಕಷ್ಟವನ್ನು ಅಕ್ಷರದಲ್ಲಿ ಹಿಡಿದಿಟ್ಟಿದ್ದು, ಎಂಥವರ ಕಣ್ಣಲ್ಲೂ ನೀರುತರಿಸುವಂತಿದೆ.

ಭಾರತೀಯ ಮಹಿಳಾ ಕ್ರಿಕೇಟರ್ ವೇದಾ ಕೃಷ್ಣಮೂರ್ತಿ ಕುಟುಂಬಕ್ಕೆ ಒಕ್ಕರಿಸಿದ ಕೊರೋನಾ ಸೋಂಕು ಇನ್ನಿಲ್ಲದ ಆಘಾತವನ್ನು ತಂದೊಡ್ಡಿದೆ. ಒಂದೇ ವಾರದಲ್ಲಿ ವೇದಾ ತಮ್ಮ ತಾಯಿ ಹಾಗೂ ಅಕ್ಕನನ್ನು ಕಳೆದುಕೊಂಡು ಕುಸಿದುಹೋಗಿದ್ದಾರೆ.

ಈ ಸಂಕಷ್ಟದ ಬಗ್ಗೆ ವೇದಾ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಮ್ಮ ಮನೆಯಲ್ಲಿ ಕೆಲವು ಹೃದಯವಿದ್ರಾವಕ ಘಟನೆಗಳು ನಡೆದುಹೋದವು. ನೀವು ನಮ್ಮ  ಮನೆಯ ಆಧಾರ ಸ್ಥಂಭವಾಗಿದ್ದೀರಿ.  ಆದರೆ ಇಂದು ನೀವಿಲ್ಲದೇ ನನಗೆ ಬದುಕುವುದು ಹೇಗೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

https://kannada.newsnext.live/sarigamapa-singer-subhramani-wife-death-corona-virus/

ಅಮ್ಮನನ್ನು ನೆನಪಿಸಿಕೊಂಡು ವೇದಾ, ನೀವು ನನ್ನನ್ನು ತುಂಬಾ ಧೈರ್ಯಶಾಲಿಗಳನ್ನಾಗಿ ಮಾಡಿದ್ದೀರಿ. ಜೀವನದಲ್ಲಿ ಪ್ರಾಯೋಗಿಕವಾಗಿರುವುದು ಮುಖ್ಯ ಎಂದು  ನನಗೆ ಕಲಿಸಿದ್ದೀರಿ. ಅಕ್ಕಾ ನೀವು ನನ್ನ ಜೀವನದ ಪ್ರಮುಖ ವ್ಯಕ್ತಿ  ಆಗಿದ್ರಿ.  ಜೊತೆಗೆ ನೀವು ಜೀವನದಲ್ಲಿ  ಕೊನೆಯವರೆಗೂ ಹೋರಾಡುವುದು ಹೇಗೆ ಎಂಬುದನ್ನು ನನಗೆ ಕಲಿಸಿದ್ದೀರಿ.

https://kannada.newsnext.live/sandalwood-sudeep-kichhatrust-helphand-corona-covid-19/

ನನಗೆ ಇಬ್ಬರೂ ತಾಯಂದಿರು ಇದ್ದಾರೆ ಎಂದು ನಾನು ಯಾವಾಗಲೂ ಅಹಂಕಾರ ಪಡುತ್ತಿದ್ದೆ. ಆದರೆ ಆ ಅಹಂಕಾರ ಕ್ಷಣಿಕವಾಯಿತು. ಕಳೆದ ಕೆಲ ಸಮಯದಿಂದ ನಾನು ನಿಮ್ಮೊಂದಿಗೆ ಖುಷಿಯ ಕ್ಷಣಗಳನ್ನು ಕಳೆದೆ. ಆದರೆ ಇದು ಕೊನೆಯ ಖುಷಿ ಕ್ಷಣ ಎಂದು ನನಗನ್ನಿಸಿರಲಿಲ್ಲ.

https://kannada.newsnext.live/twitter-helphand-india-110cr-jack-ceo-corona-covid-19/

ನಾನು ಮುಂದೇ ಏನು ಮಾಡಬೇಕು ಎಂಬುದು ನನಗೆ ಅರಿಯದಾಗಿದೆ. ಈಗ ಬದುಕಿನ ಹಾದಿಯೇ ಬದಲಾದಂತೆ ಅನ್ನಿಸುತ್ತಿದೆ. ನಾನು ನಿಮ್ಮಿಬ್ಬರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲ ತಮ್ಮ ಸಂಕಷ್ಟದ ಹೊತ್ತಿನಲ್ಲಿ ಜೊತೆಗೆ ನಿಂತ ಎಲ್ಲರಿಗೂ  ವೇದಾ ಕೃಷ್ಣಮೂರ್ತಿ ಧನ್ಯವಾದ ಸಲ್ಲಿಸಿದ್ದಾರೆ.  

Comments are closed.