ದುಬೈ- ಭಾರತ ಸಂಪರ್ಕ ಕಡಿತ : 2 ವಾರ ಅಂತಾರಾಷ್ಟ್ರೀಯ ವಿಮಾನ ಸೇವೆ ಸಂಪೂರ್ಣ ರದ್ದು

0

ದುಬೈ: ಕೊರೊನಾ ವೈರಸ್ ಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಎರಡು ವಾರಗಳ ಕಾಲ ಎಲ್ಲಾ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ !

ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್ ಇದೀಗ 100 ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 1,30,000ಕ್ಕೂ ಮಂದಿಗೆ ಸೋಂಕು ತಗುಲಿದೆ. ಚೀನಾದಲ್ಲಿ ಆರಂಭಗೊಂಡ ಕೊರೊನಾ ಮರಣ ಮೃದಂಗ ಇದೀಗ ಗಲ್ಪ್ ರಾಷ್ಟ್ರಗಳಿಗೂ ವ್ಯಾಪಿಸಿದೆ.

ವಿಶ್ವದಾದ್ಯಂತ 5 ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅದ್ರಲ್ಲೂ ಸೌದಿ ಅರೇಬಿಯಾದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರೋ ಬೆನ್ನಲ್ಲೇ ಅಂತರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಿದೆ ಎಂಬ ಸುದ್ದಿ ಎಲ್ಲೆಡೆಯಲ್ಲಿಯೂ ಹರಿದಾಡುತ್ತಿದೆ.

ಹಿರಿಯ ನಾಗರೀಕರು ಮನೆಯಲ್ಲಿಯೇ ಇರಬೇಕೆಂದು ಆರೋಗ್ಯಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ದುಬೈನಲ್ಲಿ ಮಾಲ್, ಬಾರ್, ಟೂರಿಸ್ಟ್ ರೆಸ್ಟೋರೆಂಟ್, ನೈಟ್ ಕ್ಲಬ್ ಗಳನ್ನು ಮಾರ್ಚ್ ಅಂತ್ಯದವರೆಗೆ ಮುಚ್ಚಲಾಗಿದೆ. ಆದರೆ ಅಂತರಾಷ್ಟ್ರೀಯ ವಿಮಾನ ಸಂಪರ್ಕ ಕಡಿತಗೊಂಡಿರುವುದು ಕೇವಲ ವದಂತಿ. ಈ ವದಂತಿಗೆ ಯಾರೂ ಕಿವಿಗೊಡಬಾರದು ಅಂತಾ ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಎಮಿರೈಟ್ಸ್ ವಿಮಾನಯಾನ ಸಂಸ್ಥೆ ಟ್ವಿಟ್ ಮಾಡಿದೆ.

Leave A Reply

Your email address will not be published.