ಮಾಜಿ ಸಚಿವ, ಹಿರಿಯ ರಾಜಕಾರಣಿ, ಶತಾಯುಷಿ ಭೀಮಣ್ಣ ಖಂಡ್ರೆ ವಿಧಿವಶ

Bheemanna Khandre Death : ಅಖಿಲ ಭಾರತ ವೀರಶೈವ ಮಹಾಸಭೆ ಮಾಜಿ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಭೀಮಣ್ಣ ಖಂಡ್ರೆ ಇಹಲೋಕ ತ್ಯಜಿಸಿದ್ದಾರೆ.

bheemanna khandre

ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಪಿತೃವಿಯೋಗವಾಗಿದೆ. ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭೆ ಮಾಜಿ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಭೀಮಣ್ಣ ಖಂಡ್ರೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಭೀಮಣ್ಣ ಖಂಡ್ರೆಗೆ 102 ವರ್ಷ ವಯಸ್ಸಾಗಿತ್ತು.

ಕಳೆದ 15 ದಿನಗಳಿಂದ ಗುದಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೀಮಣ್ಣ ಖಂಡ್ರೆ ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡಿತ್ತು. ಕೊನೆಯಾಸೆಯಂತೆ ತಾನು ಮನೆಯಲ್ಲಿ ಇರಬೇಕು ಎಂದಿದ್ದ ಭೀಮಣ್ಣ ಖಂಡ್ರೆಯವರ ಮಾತಿನಂತೆ ಅವರನ್ನು ಮನೆಗೆ ಶಿಫ್ಟ್​ ಮಾಡಲಾಗಿತ್ತು. ಅಂತೆಯೇ ನಿನ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಸ್ವಗೃಹದಲ್ಲಿಯೇ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಹುಟ್ಟು ಹೋರಾಟದ ಕಿಚ್ಚನ್ನು ಹೊತ್ತಿಸಿಕೊಂಡಿದ್ದ ಭೀಮಣ್ಣ ಖಂಡ್ರೆ ಮಹಾತ್ಮ ಗಾಂಧೀಜಿ ಜೊತೆಯಲ್ಲಿ ಸಾಕಷ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಮಾತ್ರವಲ್ಲದೇ ಕರ್ನಾಟಕ ಏಕೀಕರಣ ಚುನಾವಣೆಯಲ್ಲಿಯೂ ಭಾಗಿಯಾಗಿದ್ದ ಖಂಡ್ರೆ, ಬೀದರ್ ಕರ್ನಾಟಕ ಬಿಟ್ಟು ಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 4 ಬಾರಿ ಶಾಸಕರಾಗಿದ್ದ ಭೀಮಣ್ಣ ಖಂಡ್ರೆ ವಿವಿಧ ಮಂತ್ರಿಗಿರಿಯನ್ನೂ ನಿಭಾಯಿಸಿದ್ದರು.
ತಂದೆಯ ನಿಧನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ತಂದೆಯವರ ಕೊನೆಯಾಸೆಯಂತೆ ಸ್ವಗ್ರಹದಲ್ಲಿಯೇ ವಿಧಿವಶರಾಗಿದ್ದಾರೆ. ಮುಂದಿನ ವಿಧಿ ವಿಧಾನಗಳ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

Scroll to Top