ಮೆಟ್ರೋ ಪ್ರಯಾಣ ದರ ಮತ್ತಷ್ಟು ದುಬಾರಿ : ಟಿಕೆಟ್​ ದರ ಏರಿಕೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್​ ರಹಿತ ಪ್ರಯಾಣಕ್ಕಾಗಿ ನಮ್ಮ ಮೆಟ್ರೋವನ್ನು ಬಹುತೇಕರು ಅವಲಂಬಿಸಿದ್ದಾರೆ. ಆದರೆ ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆಯಾಗುತ್ತಲೇ ಇದ್ದು ಟ್ರಾಫಿಕ್​ ಕಾಟ ತಪ್ಪಿಸಲು ಹೋಗಿ ಸಿಟಿ ಮಂದಿ ದರ ಏರಿಕೆ ಕಾಟಕ್ಕೆ ಸಿಲುಕಿದಂತೆ ಆಗಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣದರವನ್ನು ಶೇಕಡಾ 5ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆಬ್ರವರಿ 9ರಿಂದಲೇ ದರ ಏರಿಕೆಯು ಜಾರಿಗೆ ಬರಲಿದೆ ಎಂದು ಬಿಎಂಆರ್​ಸಿಎಲ್​ ಸೂಚನೆ ನೀಡಿದೆ. ಇದು ನಮ್ಮ ಮೆಟ್ರೋ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ವರ್ಷ ಕೂಡ ಫೆಬ್ರವರಿ 9ರಿಂದಲೇ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಈ ಭಾರಿಯೂ ಫೆಬ್ರವರಿ 9ರಿಂದಲೇ ಟಿಕೆಟ್​ ದರ ಮತ್ತಷ್ಟು ಏರಿಕೆ ಕಾಣಲಿದೆ. ಕನಿಷ್ಟ 2 ರಿಂದ 5 ರೂಪಾಯಿಗಳವರೆಗೆ ದರ ಏರಿಕೆ ಆಗಬಹುದು ಎಂದು ಬಿಎಂಆರ್​ಸಿಎಲ್​ ತಿಳಿಸಿದೆ. ನಿರ್ವಹಣಾ ಕಾರಣ ನೀಡಿ ಮೆಟ್ರೋ ಟಿಕೆಟ್​ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಬಿಎಂಆರ್​ಸಿಎಲ್​ ಪ್ರಸ್ತಾವನೆ ಸಲ್ಲಿಸಿತ್ತು.

ಇದನ್ನೂ ಓದಿ: ಶೀಘ್ರದಲ್ಲೇ ಪಾಲಿಟೆಕ್ನಿಕ್​, ಇಂಜಿನಿಯರಿಂಗ್​ ಕಾಲೇಜುಗಳಿಗೆ 2000 ಬೋಧಕ ಹುದ್ದೆಗಳ ನೇಮಕಾತಿ

ಕಳೆದ 2 ವರ್ಷಗಳಿಂದ ಫೆಬ್ರವರಿ 9ಕ್ಕೆ ಮೆಟ್ರೋ ಪ್ರಯಾಣ ದರ ಏರಿಕೆ ಆಗುತ್ತಿರುವ ಸಂಪ್ರದಾಯವನ್ನು ನೋಡಿದರೆ ಪ್ರತಿ ವರ್ಷ ಫೆಬ್ರವರಿ 9ರಂದು ಬೆಲೆ ಏರಿಕೆಯ ಸಂಪ್ರದಾಯ ಮುಂದುವರಿಯಬಹುದಾ ಎಂಬ ಅನುಮಾನ ಕೂಡ ಇದೀಗ ಸಿಟಿಮಂದಿಯಲ್ಲಿ ಮೂಡಿದೆ. ವೇಗದ, ಆರಾಮದಾಯಕ ಪ್ರಯಾಣ ರಾಜಧಾನಿ ಮಂದಿಯ ಜೇಬು ಸುಡುತ್ತಿದ್ದು ಅದ್ಯಾವಾಗ ಈ ಅಸಮಾಧಾನ ಪ್ರತಿಭಟನೆಯ ರೂಪ ತಾಳುತ್ತೋ ಎಂಬುದನ್ನು ಕಾದು ನೋಡಬೇಕಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories