‘ಸಂಪಾಯಿತಲೇ ಪರಾಕ್’ : ಸುಕ್ಷೇತ್ರ ಮೈಲಾರದಲ್ಲಿ ಹೊರಬಿತ್ತು ವಾರ್ಷಿಕ ಕಾರಣಿಕ
ಐತಿಹಾಸಿಕ ಸುಕ್ಷೇತ್ರ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ನಡೆಯುವ ಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಜನಸ್ತೋಮವೇ ಹರಿದುಬಂದಿತ್ತು. ಈ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಕಾರ್ಣಿಕ ನುಡಿ 2026 ಹೊರಬಿದ್ದಿದ್ದು ಭವಿಷ್ಯ ವಾಣಿ ತಿಳಿದು ಭಕ್ತಾದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
18 ಅಡಿ ಬಿಲ್ಲನೇರಿದ ಗೊರವಯ್ಯ ರಾಮಪ್ಪ ‘ಸಂಪಾಯಿತಲೇ ಪರಾಕ್’ ಎಂದು ದೇವವಾಣಿ ನುಡಿದಿದ್ದಾರೆ. ವರ್ಷಕ್ಕೊಮ್ಮೆ ನುಡಿಯುವ ಈ ಭವಿಷ್ಯವಾಣಿಯು ನಮ್ಮ ನಾಡಿನ ಮಳೆ, ಬೆಳೆ, ರಾಜಕೀಯಗಳ ಏಳು ಬೀಳುಗಳ ಬಗ್ಗೆ ನೀಡುವ ಮುನ್ಸೂಚನೆಯಾಗಿದೆ.
ಈ ಬಾರಿ ಗೊರವಯ್ಯ ಸಂಪಾಯಿತಲೇ ಪರಾಕ್ ಎಂದು ಹೇಳಿದ್ದಾರೆ. ಇದರ ಅರ್ಥ ಈ ವರ್ಷದ ನಾಡಿನಲ್ಲಿ ಸಮೃದ್ಧಿ, ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲಿದೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ. ಹಾಗೂ ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸುವುದಿಲ್ಲ. ರಾಜಕೀಯದಲ್ಲಿಯೂ ಯಾವುದೇ ಅಸ್ಥಿರತೆ ಇಲ್ಲ ಎಂದು ಹೇಳಿದೆ.



