‘ಫಸ್ಟ್ ನ್ಯೂರೋ’ ವೈರಸ್ ಮೂಲ ಕೇರಳವೇ ? ಇಂದು ಹೊರಬೀಳುತ್ತೆ ಕೊರೊನಾ ಮೂಲದ ಸತ್ಯ

0

ಮಂಗಳೂರು : ಕರಾವಳಿಯ ಜಿಲ್ಲೆಗಳನ್ನೇ ನಡುಗಿಸಿರೋ ಕೊರೊನಾ ಸೋಂಕಿನ ಮೂಲದ ಸಂಶೋಧನೆ ನಡೆಯುತ್ತಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯೀಗ ಸೂಪರ್ ಸ್ಪ್ರೆಡ್ಡರ್ ಆಗಿದ್ದು ಬರೋಬ್ಬರಿ 50ಕ್ಕೂ ಅಧಿಕ ಮಂದಿಗೆ ಸೋಂಕು ಹರಡಿಸಿದೆ. ಮಂಗಳೂರು, ಭಟ್ಕಳದ ವೈರಸ್ ಸೋಂಕಿಗೆ ಕೇರಳದ ನಂಟಿರುವುದು ಬಯಲಾಗಿದೆ !

ಹೌದು, ದಕ್ಷಿಣ ಕನ್ನಡ ಹಾಗು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಸಬಾ, ಬೋಳೂರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದೃಢಪಡುತ್ತಿರುವ ಕೊರೊನಾ ಸೋಂಕಿತರಿಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟಿದೆ. ಈಗಾಗಲೇ ಸರಿ ಸುಮಾರು 50 ಮಂದಿಗೆ ಫಸ್ಟ್ ನ್ಯೂರೋ ಆಸ್ಪತ್ರೆ ಕೊರೊನಾ ಸೋಂಕು ಹರಡಿಸಿದೆ. ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಮೂವರು ಕೊರೊನಾ ಪೀಡಿತರ ಸಾವಿಗೂ ಇದೇ ಆಸ್ಪತ್ರೆಯೇ ಕಾರಣ.

ಕಳೆದ ಎಪ್ರಿಲ್ 22 ರಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ದೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ಆಸ್ಪತ್ರೆಗೆ ವ್ಯಾಪಿಸಿದ್ದ ಕೊರೊನಾ ಸೋಂಕಿನ ಮೂಲವನ್ನು ಹುಡುಕುವಲ್ಲಿ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ, ಅರೋಗ್ಯ ಇಲಾಖೆಯಾಗಲಿ ಮುಂದಾಗಿಲ್ಲ. ಆದ್ರೀಗ ಜನರ ಒತ್ತಡ, ಟೀಕೆಯ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕೊರೊನಾ ಸೋಂಕು ಹರಡಿರೊ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಸಚಿವರ ಆದೇಶದ ಬೆನ್ನಲ್ಲೇ ಇದೀಗ ಆರೋಗ್ಯ ಇಲಾಖೆ ತಜ್ಞ ವೈದ್ಯರ ಮೂಲಕ ತನಿಖೆ ನಡೆಸುತ್ತಿದೆ. ಕೊರೊನಾ ವೈರಸ್ ಜಾಡು ಹಿಡಿದಿರುವ ತಜ್ಞರು ಈಗಾಗಲೇ ಸಂಶೋಧನಾ ವರದಿಯನ್ನು ಸಿದ್ದಪಡಿಸಿದ್ದಾರೆ. ಆದ್ರೀಗ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಕೊರೊನಾ ವ್ಯಾಪಿಸಿರುವ ಫಸ್ಟ್ ನ್ಯೂರೋ ಅಸ್ಪತ್ರೆಯ ವೈರಸ್ ಮೂಲ ಕೇರಳ ಅನ್ನೋದು ಬಯಲಾಗಿದೆ ? ಮಂಗಳೂರಿನಲ್ಲಿನರುವ ಫಸ್ಟ್ ನ್ಯೂರೋ ಆಸ್ಪತ್ರೆಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಕೇರಳಿಗರು ಆಗಮಿಸುತ್ತಾರೆ.

ಕೇರಳದಲ್ಲಿ ಫೆಬ್ರವರಿ ತಿಂಗಳಲ್ಲಿಯೇ ಕೊರೊನಾ ಕಾಣಿಸಿಕೊಂಡಿತ್ತು. ಆದರೂ ಮಂಗಳೂರಿಗೆ ಕೇರಳಿಗರು ಬರೋದು ತಪ್ಪಿರಲಿಲ್ಲ. ಆದರೆ ವಿದೇಶದಿಂದ ಬಂದಿದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೂ ಖಾಸಗಿ ಆಸ್ಪತ್ರೆಗಳು ಕೇರಳದ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳುತ್ತಿದ್ದರು. ಲಾಕ್ ಡೌನ್ ಜಾರಿಯಾಗಿದ್ದರೂ ಕೇರಳದ ರೋಗಿಗಳು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಡಿ ಸೀಲ್ ಡೌನ್ ಆದ ಮೇಲಷ್ಟೇ ಕೇರಳ -ಕರ್ನಾಟಕದ ಸಂಪರ್ಕ ಕಡಿತವಾಗಿತ್ತು.

ಹೀಗೆ ಕೇರಳದಿಂದ ಚಿಕಿತ್ಸೆಗೆ ಬಂದಿದ್ದ ಕೊರೊನಾ ಸೋಂಕಿತನಿಂದಲೇ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕೊರೊನಾ ವ್ಯಾಪಿಸಿದೆ ಎನ್ನಲಾಗುತ್ತಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅತ್ತೆಯನ್ನು ನೋಡಲು ಬರುತ್ತಿದ್ದ ಬಂಟ್ವಾಳದ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ವೃದ್ದೆ ಕೂಡ ಕೊರೊನಾಕ್ಕೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30ಕ್ಕೂ ಅಧಿಕ ಮಂದಿ ಕೊರೊನಾಕ್ಕೆ ತುತ್ತಾಗಿದ್ರೆ, ಭಟ್ಕಳದಲ್ಲಿಯೂ ಈ ಸಂಖ್ಯೆ 20 ದಾಟಿದೆ. ಎರಡೂ ಜಿಲ್ಲೆಗಳಲ್ಲಿಯೂ ಅಧಿಕ ಮಂದಿಗೆ ಸೋಂಕು ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದಲೇ ವ್ಯಾಪಿಸಿದೆ.
ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಫಸ್ಟ್ ನ್ಯೂರೋ ಆಸ್ಪತ್ರೆಗೆ ವೈರಸ್ ಸೋಂಕು ಹರಡಿರುವ ಕುರಿತು ವರದಿ ನೀಡಲಿದ್ದಾರೆ. ಹೀಗಾಗಿ ವೈದ್ಯರ ವರದಿ ತೀವ್ರ ಕುತೂಹಲವನ್ನು ಮೂಡಿಸಿದೆ. ಒಂದೊಮ್ಮೆ ಆಸ್ಪತ್ರೆಯ ನಿರ್ಲಕ್ಷ್ಯ ಕಂಡುಬಂದ್ರೆ ಫಸ್ಟ್ ನ್ಯೂರೋ ಆಸ್ಪತ್ರೆಗೆ ಶಾಶ್ವತವಾಗಿ ಬೀಗಮುದ್ರೆ ಬೀಳೋದು ಖಚಿತ.

Leave A Reply

Your email address will not be published.