ನಾಳೆಯಿಂದ ಬಡವರಿಗೆ ಉಚಿತವಾಗಿ ಹಾಲು : ಅನ್ನದಾತರ ಬೆಂಬಲಕ್ಕೆ ನಿಂತ ಬಿಎಸ್ ವೈ

0

ಬೆಂಗಳೂರು : ರಾಜ್ಯದಾದ್ಯಂತ ಬಡವರಿಗೆ ನಾಳೆಯಿಂದ ಉಚಿತವಾಗಿ ಹಾಲು ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 7 ಲಕ್ಷ ಲೀಟರ್ ಹೆಚ್ಚುವರಿ ಹಾಲು ಸಂಗ್ರಹವಾಗುತ್ತಿದ್ದು, ಈ ಹಾಲವನ್ನು ಬಡವರಿಗೆ ವಿತರಿಸಲು ಯೋಜನೆ ಮಾಡಲಾಗಿದೆ. ನಾಳೆಯಿಂದ ಎಪ್ರಿಲ್ 14ರ ವರೆಗೆ ಸ್ಲಂಗಳಲ್ಲಿ ಹಾಲು ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದರು.

Milk procurement

ರೈತರ ಬೆಳೆಗಳನ್ನು ಮಾರಾಟ ಮಾಡಲಾಗದೆ ಸಾವನ್ನಪ್ಪಿರುವ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ರಾಜ್ಯದಾದ್ಯಂತ ರೈತರ ಬೆಳೆಗಳ ಮಾರಾಟಕ್ಕೂ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತವೇ ರೈತರ ಬೆಳೆಗಳನ್ನು ಖರೀದಿ ಮಾಡಬೇಕು. ಮಾತ್ರವಲ್ಲದೇ ಅಗತ್ಯವಿರುವ ಕಡೆಗಳಿಗೆ ಬೆಳೆಗಳನ್ನು ವಿತರಿಸುವ ಕಾರ್ಯವನ್ನು ಮಾಡಬೇಕೆಂಬ ಸೂಚನೆಯನ್ನು ನೀಡಿದ್ದಾರೆ.

ಅಲ್ಲದೇ ರೈತರು ಬೆಳೆದ ಬೆಳಗಳನ್ನು ಹೊರ ರಾಜ್ಯಗಳಿಗೂ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಇನ್ನು ರಾಜ್ಯದಾದ್ಯಂತ ಅಕ್ಕಿಯ ಮಿಲ್ ಗಳನ್ನು ತೆರೆಯಲು ಬಿ.ಎಸ್.ಯಡಿಯೂರಪ್ಪ ಸೂಚನೆಯನ್ನು ನೀಡಿದ್ದಾರೆ. ಅಗತ್ಯ ವಸ್ತುಗಳ ಖರೀದಿಗಾಗಿ ರಾಜ್ಯದಾದ್ಯಂತ ಬೆಳಗ್ಗಿನಿಂದ ಸಂಜೆಯವರೆಗೂ ಅವಕಾಶವನ್ನು ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಕೇವಲ ಒಬ್ಬರೇ ಹೋಗಬೇಕು. ಕೊರೊನಾ ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆಯನ್ನು ನೀಡಿದ್ದಾರೆ.

Leave A Reply

Your email address will not be published.