ಗಂಧದ ಗುಡಿ ಕರುನಾಡಿಗೆ ಸಪ್ಲೇ ಆಗ್ತಿತ್ತಾ ಕೋಟೆನಾಡಿನಿಂದ ಗಾಂಜಾ.?

0

ಚಿತ್ರದುರ್ಗ : ಸ್ಯಾಂಡಲ್ ವುಡ್ ನಲ್ಲಿ ಗಾಂಜಾ ಗಮ್ಮತ್ತು ಜೋರಾದ ಬೆನ್ನಲ್ಲೇ ಕೋಟೆನಾಡಲ್ಲಿ ಗಾಂಜಾ ತೋಟ ಬೆಳಕಿಗೆ ಬಂದಿದೆ. ಬರೋಬ್ಬರಿ 4 ಎಕರೆ ಗಾಂಜಾ ತೋಟದ ಮೇಲೆ ರಾಂಪುರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.


ಚಿತ್ರದುರ್ಗ ‌ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ವಡೇರಹಳ್ಳಿ ‌ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಒಂದು ಕೋಟಿಗೂ ಅಧಿಕ ಮೌಲ್ಯದ ಗಾಂಜಾವನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ‌ಎಸ್.ಪಿ. ಜಿ. ರಾಧಿಕಾ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಇನ್ನು ಗಾಂಜಾ ಪ್ರಕರಣದ ಪ್ರಮುಖ ಆರೋಪಿ ರುದ್ರೇಶ್ ತಲೆ ಮರೆಯಿಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.


ರಾಂಪುರ ಮೂಲದ ಮಂಜುನಾಥ್ ಮತ್ತು ಜಂಬುನಾಥ್, ಮಂಜುನಾಥ್ ಎಂಬ 3ಜನ ಸಹೋದರರಿಗೆ ಸೇರಿದ ಜಮೀನನ್ನು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಪುರದ ನಿವಾಸಿಯಾಗಿರುವ ರುದ್ರೇಶ್ ಎಂಬಾತ ಸಮಂತ್ ಗೌಡ ಎಂಬ ಮದ್ಯವರ್ತಿ ಮೂಲಕ ಜಮೀನನ್ನು ಗುತ್ತಿಗೆಗೆ ಪಡೆದಿದ್ದ. ವರ್ಷಕ್ಕೆ 1ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಗುತ್ತಿಗೆ ಪಡೆದಿದ್ದ.

ಸ್ಯಾಂಡಲ್ ವುಡ್ ಗಾಂಜಾ ಲಿಂಕ್ ಬಗ್ಗೆಯೂ ವಿಚಾರಣೆ !
ಸ್ಯಾಂಡಲ್ ವುಡ್ ನಲ್ಲಿ ಕೇಳಿ‌ಬಂದಿರುವ ಗಾಂಜಾ ಮಾಫಿಯಾಕ್ಕೂ ಕೋಟೆನಾಡಿನ ಗಾಂಜಾ ಸಾಗಾಟಕ್ಕೂ ಲಿಂಕ್ ಇದೆಯಾ ಎಂಬ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave A Reply

Your email address will not be published.