Health Tips Best medicine to prevent heart attack Sesame : ಎಳ್ಳು– ಇದು ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ ಅಂದ್ರೆ ತಪ್ಪಾಗಲ್ಲ. ನಮ್ಮ ಪಿತೃ ಕರ್ಮಗಳಿಂದ ಹಿಡಿದು ಗ್ರಹಗಳ ಅಧಿಪತಿಯಾಗಿರುವ ಶನಿ ದೇವರ ಪೂಜೆ, ಗಣ ಹೋಮದ ಪ್ರಸಾದದ ವರೆಗೆ ನಮ್ಮಲ್ಲಿ ಎಳ್ಳಿನ ಉಪಯೋಗ ಮಾಡುತ್ತಾರೆ. ಇನ್ನು ದೇವರಿಗಂತೂ ಎಳ್ಳೆಣ್ಣೆಯ ದೀಪವನ್ನು ಹಚ್ಚಿದ್ರೆ ಉತ್ತಮ ಅಂತ ನಮ್ಮಲ್ಲಿ ನಂಬಿಕೆ ಇದೆ. ಇಂದಿಗೂ ಹಲವಾರು ಮನೆಯಲ್ಲಿ ಇದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಇದನ್ನು ನಮ್ಮ ಪೂರ್ವಜರು ಹಲವು ಬಾರಿ ಬಳಸುತ್ತಿದ್ರು ಅಂದ್ರೆ ಅದರ ಮಹತ್ವವನ್ನು ನೀವೇ ಅರ್ಥ ಮಾಡಿ ಕೊಳ್ಳಬೇಕು ಅಲ್ವಾ?

ಹೌದು ಎಳ್ಳು ನಮ್ಮ ಪಾಲಿಗೆ ದಿವ್ಯ ಔಷಧ ಅಂದ್ರೆ ತಪ್ಪಾಗಲ್ಲ . ನಮ್ಮಲ್ಲಿನ ಆರೋಗ್ಯ ಸಮಸ್ಯೆ ಯನ್ನು ನಿತ್ಯ ಸೇವಿಸುವ ಒಂದು ಚಮಚ ಎಳ್ಳಿನಿಂದ ಪರಿಹಾರ ಮಾಡಬಹುದು. ಇದಕ್ಕೆ ಕಾರಣ ಇದರಲ್ಲಿ ಇರುವ ಅನೇಕ ತರಹದ ಆರೋಗ್ಯಕರ ಗುಣ . ಹೌದು ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ , ಉತ್ತಮ ಕೊಬ್ಬು , ಆಂಟಿಆಕ್ಸಿಡೆಂಟ್ , ಹಾಗೂ ಬಿ ೬ ನಂತಹ ಶಕ್ತಿ ವರ್ಧಕಗಳಿವೆ . ಇದು ಅತಿ ಹೆಚ್ಚು ನಾರಿನ ಅಂಶವನ್ನು ಹೊಂದಿದ್ದು ದೇಹದಲ್ಲಿ ಬೇಗ ಆಹಾರ ಜೀರ್ಣವಾಗುದಕ್ಕೂ ಇದು ಕಾರಣ ಅಂದ್ರೆ ತಪ್ಪಗಲ್ಲ ನಿಗದಿತ ಪ್ರಮಾಣದಲ್ಲಿ ಆಹಾರದಲ್ಲಿ ಎಳ್ಳನ್ನು ಸೇವಿಸಿದ್ರೆ ಕುರುಳಿಗೆ ಸಂಬಂಧಿದ ಸಮಸ್ಯೆ ಪರಿಹಾರ ವಾಗುತ್ತೆ ಅಂತಾರೆ ವೈದ್ಯರು.
ಇದನ್ನೂ ಓದಿ :ಸರ್ವರೋಗಗಳಿಗೂ ರಾಮಬಾಣ ಬೂದುಕುಂಬಳಕಾಯಿ – ಈ ರೀತಿ ಸೇವಿಸದ್ರೆ ಕ್ಯಾನ್ಸರ್ ಬರೋದೇ ಇಲ್ಲ

ಬಿಪಿ ಹಾಗೂ ಕೊಲೆಸ್ಟ್ರಾಲ್ ಹಿಡಿತ
ಈಗಿನ ಜನರ ಮುಖ್ಯ ಸಮಸ್ಯೆ ಅಂದ್ರೆನೇ ಹೆಚ್ಚಿದ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದ ಒತ್ತಡ . ಇದರಿಂದ ದಿನೇದಿನೇ ಹೃದಯಾಘಾತಕ್ಕೆ ತುತ್ತಾಗುವರ ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತಿದೆ. ನಾವು ನಿಯಮಿತವಾಗಿ ಎಳ್ಳನ್ನು ಸೇವಿಸೂದರಿಂದ ದೇಹದಲ್ಲಿ ಒಳ್ಳೆ ಕೊಬ್ಬು ಹೆಚ್ಚಾಗಿ ಉತ್ಪಾದನೆಯಾಗಿ ಕೆಟ್ಟ ಕೊಬ್ಬ ನಿಯಮಿತವಾಗಿ ಕಡಿಮೆಯಾಗುವುದಕ್ಕೆ ಸಹಾಯವಾಗುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ :Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ
ಹೆಣ್ಣು ಮಕ್ಕಳಪಾಲಿಗೆ ದಿವ್ಯಔಷಧ :
ಎಳ್ಳು ಗರ್ಭಕೋಶ ಸಂಬಂಧಿಸಿದ ಹಲವು ರೋಗಗಳಿಗೆ ಔಷಧ ಅಂದ್ರೆ ತಪ್ಪಾಗಲ್ಲ . ಮುಟ್ಟಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗನ್ನು ಇದು ಪರಿಹಾರ ಮಾಡುತ್ತೆ .ಸಕಾಲದಲ್ಲಿ ಮುಟ್ಟಾಗದೇ ಇರೋದು, ಮುಟ್ಟಿನದಿನಗಳಲ್ಲಿ ಏರು ಪೇರು, ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಇಂತಹಾ ಸಮಸ್ಯೆ ಬಗೆಹರಿಸಲು ಸಹಕಾರಿ . ಇನ್ನು ಮುಟ್ಟು ಬೇಗ ಆಗೋಕೆ ಕೂಡಾ ಇದು ತುಂಬಾ ಹೆಲ್ಪ್ ಮಾಡುತ್ತೆ . ಇನ್ನು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡಾ ಇದ್ದು ಇದು ಮಹಿಳೆಯರ ಮೂಳೆಯ ಬೆಳವಣಿಗೆ ಹಾಗೂ ಗರ್ಭ ಕೋಶದ ಆರೋಗ್ಯದಲ್ಲಿ ಮುಖ್ಯ ಪಾತ್ರವಹಿಸುತ್ತೆ.

ಆದ್ರೆ ಗರ್ಭಿಣಿಯಾಗುವ ವೇಳೆಯಲ್ಲಿ ಮಾತ್ರ ಇದರ ಬಳಕೆಯನ್ನು ಮಾಡಬಾರದು ಅನ್ನೋದನ್ನು ನಮ್ಮ ಹಿರಿಯರು ಹೇಳಿದ್ದಾರೆ. ಆದ್ರೆ ಸಾಮಾನ್ಯ ವೈದ್ಯಕೀಯ ವಿಜ್ಞಾನದಲ್ಲಿ ಇದಕ್ಕೆ ಯಾವುದೇ ಮಹತ್ವವಿಲ್ಲ. ಒಟ್ಟಾರೆ ನಮ್ಮ ಅಡಿಗೆ ಮನೆಯಲ್ಲಿ ಬಳಕೆಯಾಗುವ ಹಲವು ವಸ್ತುಗಳು ನಮ್ಮ ಆರೋಗ್ಯಕ್ಕೆ ಕಾರಣ ಅಂದರೆ ನಂಬಲೇ ಬೇಕು. ನಮ್ಮ ಹಿರಿಯರಂತೆ ನಾವು ಇಂತಹ ಅಡಿಗೆ ಪದಾರ್ಥವನ್ನು ಬಳಸಿದ್ರೆ ನಮ್ಮ ಆರೋಗ್ಯವೂ ಉತ್ತಮವಾಗುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ :ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ
Health Tips Best medicine to prevent heart attack Sesame can cure many diseases