ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್‌ : ವಿಕೆಟ್‌ ಕೀಪಿಂಗ್‌ನಲ್ಲೂ ರಿಷಬ್‌ ಪಂತ್‌ ದಾಖಲೆ ಉಡೀಸ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ Indian Premier League 2024 (IPL 2024) ರಾಜಸ್ಥಾನ ರಾಯಲ್ಸ್‌ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಸಂಜು ಸ್ಯಾಮ್ಸನ್‌ ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದು ಮಾತ್ರವಲ್ಲ ವಿಕೆಟ್‌ ಕೀಪರ್‌ ಆಗಿ ರಿಷಬ್‌ ಪಂತ್‌ (Rishab Panth) ದಾಖಲೆಯನ್ನೇ ಹಿಂದಿಕ್ಕಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ Indian Premier League 2024 (IPL 2024) ರಾಜಸ್ಥಾನ ರಾಯಲ್ಸ್‌ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಅದ್ರಲ್ಲೂ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆಕರ್ಷಕ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (RR Vs RCB) ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಸಂಜು ಸ್ಯಾಮ್ಸನ್‌ ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದು ಮಾತ್ರವಲ್ಲ ವಿಕೆಟ್‌ ಕೀಪರ್‌ ಆಗಿ ರಿಷಬ್‌ ಪಂತ್‌ (Rishab Panth) ದಾಖಲೆಯನ್ನೇ ಹಿಂದಿಕ್ಕಿದ್ದಾರೆ.

Indian Premier League 2024 IPL 2024 Sanju Samson brought victory to Rajasthan Royals Rishabh Pant's record of wicket-keeping also breaks
Image Credit to Original Source

ಐಪಿಎಲ್ 2024 ರ ಅಂಕಪಟ್ಟಿಯಲ್ಲಿ ಸದ್ಯ ರಾಜಸ್ಥಾನ ರಾಯಲ್ಸ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಆಡಿದ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವ ಫೇವರೇಟ್‌ ತಂಡವಾಗಿ ಹೊರಹೊಮ್ಮಿದೆ. ಅದ್ರಲ್ಲೂ ತಂಡದ ನಾಯಕ, ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಅಜೇಯ 82 ರನ್ ಗಳಿಸಿದ್ದರು. ಇದೀಗ ಬೆಂಗಳೂರು ವಿರುದ್ದವೂ ಮತ್ತೊಮ್ಮೆ ಆರ್ಭಟಿಸಿದ್ದಾರೆ.

ಇದನ್ನೂ ಓದಿ : ಐಪಿಎಲ್ 2024 : 3.6 ಕೋಟಿ ರೂ.ಗೆ ಗುಜರಾತ್‌ ಟೈಟಾನ್ಸ್‌ ಖರೀದಿಸಿದ್ದ ರಾಬಿನ್ ಮಿಂಜ್ ಗೆ ಬೈಕ್‌ ಅಪಘಾತ

ಸಂಜು ಸ್ಯಾಮ್ಸನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ದ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. RR vs RCB ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಸತತ ನಾಲ್ಕನೇ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಎರಡನೇ ಎಸೆತದಲ್ಲಿ ಡಕ್‌ ಆಗಿ ಫೇವಿಲಿಯನ್‌ ಸೇರಿಕೊಳ್ಳುತ್ತಿದ್ದಂತೆಯೇ ಕ್ರೀಸ್‌ಗೆ ಆಗಮಿಸಿದ ಸಂಜು ಸ್ಯಾಮ್ಸನ್‌ 42 ಎಸೆತಗಳಲ್ಲಿ 69 ರನ್ ಬಾರಿಸಿದ್ದಾರೆ.

Indian Premier League 2024 IPL 2024 Sanju Samson brought victory to Rajasthan Royals Rishabh Pant's record of wicket-keeping also breaks
Image Credit to Original Source

ಜೋಸ್ ಬಟ್ಲರ್ ಜೊತೆಯಾದ ಸಂಜು ಸ್ಯಾಮ್ಸನ್‌ ಅವರು 148 ರನ್‌ ಜೊತೆಯಾಟ ಆಡಿದ್ದಾರೆ. ಭಾರತ ಟಿ20 ( T20I)ತಂಡಕ್ಕೆ ಮರಳಲು ಪ್ರಯತ್ನಿಸುತ್ತಿರುವ ಸ್ಯಾಮ್ಸನ್, ಐಪಿಲ್‌ನ ( IPL 2024) ಪ್ರಸಕ್ತ ಋತುವಿನಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಮೂರನೇ ಅತಿ ಹೆಚ್ಚು ರನ್‌ ಗಳಿಸಿದ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ :ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಬ್ ಪಂತ್ ನಾಯಕ : ಐಪಿಎಲ್‌ 2024ಕ್ಕೆ ಕೋಚ್‌ ರಿಕಿ ಪಾಂಟಿಂಗ್ ಭರ್ಜರಿ ಫ್ಲ್ಯಾನ್‌

IPL 2024: ಅತೀ ಹೆಚ್ಚು ರನ್‌ ಗಳಿಸಿದ ವಿಕೆಟ್‌ಕೀಪರ್‌
ಸಂಜು ಸ್ಯಾಮ್ಸನ್ 178
ಹೆನ್ರಿಕ್ ಕ್ಲಾಸೆನ್ 177
ರಿಷಬ್ ಪಂತ್ 152
ಕ್ವಿಂಟನ್ ಡಿ ಕಾಕ್ 139
ಜೋಸ್ ಬಟ್ಲರ್ 135

ಭಾರತದ ಪರ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಬ್‌ ಪಂತ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರೂ ಕೂಡ ಟಾಪ್‌ ೫ರಲ್ಲಿ ಸ್ಥಾನ ಪಡೆದಿದ್ರೆ, ಈ ಬಾರಿಯ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ವಿಕೆಟ್‌ ಕೀಪರ್‌ ಸಾಲಿನಲ್ಲಿ ಸಂಜು ಸ್ಯಾಮ್ಸನ್‌ ಅಗ್ರಸ್ಥಾನದಲ್ಲಿದ್ರೆ, ರಿಷಬ್‌ ಪಂತ್‌ ಮೂರನೇ ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್‌ ತಂಡದಿಂದ ಹೊರಬಿದ್ದ ಬೆಂಕಿ ಬೌಲರ್‌, ಶ್ರೀಲಂಕಾದ ಈ 3 ಆಟಗಾರರು ಐಪಿಎಲ್‌ಗೆ ಅನುಮಾನ

ಜೋಸ್‌ ಬಟ್ಲರ್ ಮತ್ತು ಕ್ವಿಂಟಾನ್‌ ಡಿ ಕಾಕ್ ಆರಂಭಿಕ ಆಟಗಾರರಾಗಿದ್ದರೆ, ಕ್ಲಾಸೆನ್ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಫಿನಿಶರ್ ಆಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಪಂತ್ ಅವರು ಸ್ಯಾಮ್ಸನ್‌ಗಿಂತ 26 ಕಡಿಮೆ ರನ್ ಗಳಿಸಿದ್ದಾರೆ. ಈ ಮೂಲಕ ಸ್ಯಾಮ್ಸನ್‌ ರಿಷಬ್‌ ಪಂತ್‌ ಅವರನ್ನು ಹಿಂದಿಕ್ಕಿದ್ದಾರೆ. ಆದರೆ ವೇಗದ ಬ್ಯಾಟಿಂಗ್‌ನಲ್ಲಿ ರಿಷಬ್‌ ಪಂತ್‌ ಸ್ಯಾಮ್ಸನ್‌ ಅವರಿಗಿಂತ ಮುಂದಿದ್ದಾರೆ.

Indian Premier League 2024 (IPL 2024) Sanju Samson brought victory to Rajasthan Royals: Rishabh Pant’s record of wicket-keeping also breaks

Comments are closed.