ಬಾಲಕಿಯ ಮೇಲೆ ಅತ್ಯಾಚಾರ ಆರೋಪ….! ಕಿರುತೆರೆ ನಟನನ್ನು ಬಂಧಿಸಿದ ಪೊಲೀಸರು…!!

ಮುಂಬೈ: ಬಾಲಕಿಯ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಹಿಂದಿ ಕಿರುತೆರೆ ನಟನನ್ನು ಪೊಲೀಸರು ಬಂಧಿಸಿದ್ದಾರೆ. ನಟನ ಬಂಧನದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಆತನ ಪರ ಹಾಗೂ ವಿರುದ್ಧ ಚರ್ಚೆ ಆರಂಭಗೊಂಡಿದೆ.

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಹಿಂದಿ ಕಿರುತೆರೆ ನಟ ಪರ್ಲ್ ಪುರಿ ತುತ್ತಾಗಿದ್ದಾರೆ. ಬಾಲಕಿಯ ಹೇಳಿಕೆ ಹಾಗೂ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರು ಪರ್ಲ್ ಪುರಿಯನ್ನು ಬಂಧಿಸಿದ್ದಾರೆ.

https://kannada.newsnext.live/rohini-sinduri-shilpa-nag-transfer-state-governament/

ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಳ್ಳುವ ಪ್ರಯತ್ನದಲ್ಲಿದ್ದ ನಟ ಪರ್ಲ್ ಪುರಿಯನ್ನು ಮೀರಾ ಭಯಾಂದರ ವಸೈ ವಿರಾರ್ ಪೊಲೀಸರು ಬಾಂಬೋಲಿ ಪೊಲೀಸರ ನೆರವಿನೊಂದಿಗೆ ಬಂಧಿಸಿದ್ದಾರೆ.

https://kannada.newsnext.live/amazon-insult-kannadiga/

ನಟನ ವಿರುದ್ಧ ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಜಾಮೀನು ಸಿಗುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ.

https://kannada.newsnext.live/two-malayalee-nurses-die-in-an-accident-in-saudi-three-injured/

ನಾಗಿನ್-3 ಹಾಗೂ ಬ್ರಹ್ಮರಾಕ್ಷಸ್ ಸೇರಿದಂತೆ ಹಲವು ಸೀರಿಯಲ್ ಗಳ ಮೂಲಕ ಪ್ರಸಿದ್ಧಿಗೆ ಬಂದಿದ್ದ ಪರ್ಲ್ ಪುರಿ, 2013 ರಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಮಾಡೆಲ್ ಆಗಿಯೂ ಗುರುತಿಸಿಕೊಂಡ ಪರ್ಲ್ ಪುರಿ, ಬೇಪನಾಹ ಪ್ಯಾರ್ ಸೀರಿಯಲ್ ನಪಾತ್ರದಲ್ಲಿ ಮಿಂಚಿದ್ದರು.

ನಿರ್ದೇಶಕಿ ಏಕ್ತಾ ಕಪೂರ್ ಪರ್ಲ್ ಪುರಿ ಪರ ನಿಂತಿದ್ದು, ನಟನ ವಿರುದ್ಧ ಬಂದಿರುವ ಆರೋಪ ಸುಳ್ಳು ಎಂದಿದ್ದಾರೆ. ಸದ್ಯ ಪರ್ಲ್ ಪುರಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Comments are closed.