ಐಎಎಸ್ ಅಧಿಕಾರಿ ವಿಜಯಶಂಕರ್ ಸಾವಿಗೆ ಕಾರಣವಾಯ್ತಾ ಐಎಂಎ ಪ್ರಕರಣ ?

0

ಬೆಂಗಳೂರು : ಸಕಾಲ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯ ಶಂಕರ್ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಹಿರಿಯ ಐಎಎಸ್ ಅಧಿಕಾರಿಯ ಸಾವಿಗೆ ಐಎಂಎ ಪ್ರಕರಣವೇ ಕಾರಣವಾಯ್ತಾ ? ಅನ್ನುವ ಮಾತುಗಳು ಕೇಳಿಬರುತ್ತಿದೆ.

ಹೌದು. ಐಎಎಸ್ ಅಧಿಕಾರಿ ವಿಜಯಶಂಕರ್ ಬೆಂಗಳೂರಿನ ಜಯನಗರ ಡಿ ಬ್ಲಾಕ್ ನಲ್ಲಿರುವ ಅವರ ಮನೆಯ ಬೆಡ್ ರೂಂ ನಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ವಿಜಯಶಂಕರ್ ಅವರ ಪತ್ನಿ ತನ್ನ ತಂದೆಯ ಮನೆಗೆ ಹೋಗಿದ್ರು. ಸಂಜೆ 7.15 ನಿಮಿಷಕ್ಕೆ ಮನೆಗೆ ಮರಳಿದಾಗ ವಿಜಯಶಂಕರ್ ಮನೆಯ ಬಾಗಿಲನ್ನು ತೆಗೆದಿರಲಿಲ್ಲ.

ಅನುಮಾನಗೊಂಡ ಬಾಗಿಲು ಒಡೆದು ಮನೆಯೊಳಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಿಗೆ ಬಂದಿದೆ. ವಿಜಯಶಂಕರ್ ನಿವಾಸಕ್ಕೆ ಇದೀಗ ತಿಲಕನಗರ ಠಾಣೆಯ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ? ಇಲ್ಲಾ ಸಾವಿಗೆ ಬೇರೆಯಾವುದಾದ್ರೂ ಕಾರಣವಿದೆಯಾ ಅನ್ನುವ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ಸಾವಿಗೆ ಕಾರಣವಾಯ್ತಾ ಐಎಂಎ ಪ್ರಕರಣ ?
ಬೆಂಗಳೂರಿನಲ್ಲಿ ನಡೆದಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ವಿಜಯಶಂಕರ್ ಆರೋಪ ಹೊತ್ತಿದ್ದರು. ಐಎಂಎ ಸಂಸ್ಥೆಯಲ್ಲಿ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹೇಳಿ ಸುಮಾರು 8,000 ಕ್ಕೂ ಅಧಿಕ ಮಂದಿಗೆ ವಂಚನೆಯನ್ನು ಮಾಡಿತ್ತು. ಈ ಕುರಿತು ಹಲವರು ದೂರು ನೀಡಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆಯ ಸಂಸ್ಥಾಪಕ ಮನ್ಸೂರ್ ಖಾನ್ ಗೆ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ವಿಜಯ ಶಂಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚೀಟ್ ಕೊಟ್ಟಿದ್ದರು. ಅಲ್ಲದೇ ವಿಜಯ ಶಂಕರ್ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಬಿಲ್ಡರ್ ಒಬ್ಬರಿಂದ 2 ಕೋಟಿ ರೂಪಾಯಿ ಲಂಚವನ್ನು ಪಡೆದುಕೊಂಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ವಂಚನೆಗೆ ಒಳಗಾಗಿದ್ದ ಸಾವಿರಾರು ಮಂದಿ ಮನ್ಸೂರ್ ಖಾನ್ ಹಾಗೂ ಐಎಂಎ ಸಂಸ್ಥೆಯ ವಿರುದ್ದ ದೂರು ನೀಡಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ ವಿಜಯಶಂಕರ್ ಸೇರಿ 11 ಮಂದಿಯ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್ ಸೇವೆಯಿಂದ ಅಮಾನತ್ತುಗೊಂಡು ಸುಮಾರು 9 ತಿಂಗಳ ಕಾಲ ಜೈಲು ಸೇರಿದ್ದರು.

ಬೇಲ್ ಮೂಲಕ ಹೊರಗಡೆ ಬಂದ ವಿಜಯ ಶಂಕರ್ ನಂತರದಲ್ಲಿ ಅಮಾನತ್ತು ರದ್ದತಿ ಮಾಡಿಕೊಂಡು ಕೆಲಸಕ್ಕೆ ಹಾಜರಾಗಿದ್ದರು. ಅಲ್ಲದೇ ಇತ್ತೀಚಿಗೆ ಸಕಾಲ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಐಎಂಎ ಲಂಚ ಪ್ರಕರಣ ವಿಜಯಶಂಕರ್ ಅವರನ್ನು ತೀವ್ರ ಮುಜುಗರಕ್ಕೆ ಈಡಾಗಿದ್ದರು ಎನ್ನಲಾಗುತ್ತಿದೆ.

ವಿಜಯಶಂಕರ್ ಗೆ ನೋಟಿಸ್ ಕೊಟ್ಟಿದ್ದ ಸಿಬಿಐ !
ಸಕಾಲ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಐಎಂಎ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ನೋಟಿಸ್ ನೀಡಿತ್ತು. 5 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚನೆಯನ್ನು ನೀಡಿತ್ತು. ಅಲ್ಲದೇ ವಿಜಯ ಶಂಕರ್ ಅವರನ್ನು ಅಭಿಯೋಜನೆಗೆ ಒಳಪಡಿಸಲು ರಾಜ್ಯ ಸರಕಾರದಿಂದಲೂ ಅನುಮತಿಯನ್ನು ಕೋರಿತ್ತು. ಆದರೆ ಅಭಿಯೋಜನೆಗೆ ಅವಕಾಶ ನೀಡದಂತೆ ವಿಜಯ ಶಂಕರ್ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ರಾಜ್ಯ ಸರಕಾರದ ಹಿರಿಯ ಅಧಿಕಾರಿಯೋರ್ವರು ಕೂಡ ಐಎಂಎ ಪ್ರಕರಣವನ್ನು ಶೀಘ್ರದಲ್ಲಿಯೇ ಮುಕ್ತಾಯಗೊಳಿಸುವಂತೆಯೂ ತಿಳಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ವಿಜಯಶಂಕರ್ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಪದೇ ಪದೇ ವಿಧಾನಸೌಧಕ್ಕೆ ಬಂದು ಹೋಗುತ್ತಿದ್ದರು ಎನ್ನಲಾಗುತ್ತಿದೆ. ಸಿಬಿಐ ಕುಣಿಕೆ ಬಿಗಿಯಾಗುತ್ತಿದ್ದಂತೆಯೇ ಬಂಧನದ ಭೀತಿಯಿಂದ ವಿಜಯಶಂಕರ್ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರಾ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ.

Leave A Reply

Your email address will not be published.