ಏರ್ಪೋರ್ಟ್ ನಲ್ಲೂ ರಾಮನಾಮ…! ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮರ್ಯಾದಾ ಪುರುಷೋತ್ತಮನ ಹೆಸರು..!!

ಲಖನೋ: ರಾಮಮಂದಿರದ ನಿರ್ಮಾಣ ಕಾರ್ಯಭರದಿಂದ ಸಾಗುತ್ತಿರುವ ಅಯೋಧ್ಯೆಯಲ್ಲಿ ಇನ್ನೂ ಎಲ್ಲವೂ ರಾಮಮಯವೇ. ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ರಾಮನ ಹೆಸರಿಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಅಯೋಧ್ಯಾ ವಿಮಾನ ನಿಲ್ದಾಣಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗುತ್ತದೆ. ಈ ನಿರ್ಣಯವನ್ನು ಉತ್ತರ ಪ್ರದೇಶದ ಸಚಿವ ಸಂಪುಟ ಸಭೆ ಅಂಗೀಕರಿಸಿದ್ದು, ವಿಧಾನಸಭೆ ಅನುಮೋದನೆ ಬಳಿಕ ಈ ಪ್ರಸ್ತಾಪ ನಾಗರೀಕ ವಿಮಾನಯಾನ ಇಲಾಖೆಯ ಒಪ್ಪಿಗೆಗಾಗಿ ರವಾನೆಯಾಗಲಿದೆ.

ಅಯೋಧ್ಯೆ ತೀರ್ಪಿನ ಬಳಿಕ ರಾಮಭೂಮಿ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಅಕ್ಟೋಬರ್ 5 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಮುಂದಿನ ಮೂರುವರೆ ವರ್ಷಗಳಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಯೋಗಿ ಆದಿತ್ಯನಾಥ ಸರ್ಕಾರ ಅಯೋಧ್ಯೆ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ದೀಪಾವಳಿಯಂದು ಅಯೋಧ್ಯೆಯಲ್ಲೇ ಹಣತೆ ಬೆಳಗಿ ಹಬ್ಬ ಆಚರಿಸಲಾಗಿತ್ತು.

Comments are closed.