ಹೊರಬಿತ್ತು ಮತ್ತೊಂದು ಖಿನ್ನತೆಯ ಕತೆ….! ಕೊಹ್ಲಿ ಹೇಳಿದ ಸತ್ಯವೇನು ಗೊತ್ತಾ…?!

ಬಾಲಿವುಡ್ ಸೆಲಿಬ್ರೆಟಿಗಳ ಬಳಿಕ ಕ್ರಿಕೆಟಿಗ್ ಹಾಗೂ ಟೀಂಇಂಡಿಯಾ ಕ್ಯಾಪ್ಟನ್ ಕೊಹ್ಲಿ ಖಿನ್ನತೆಯ ಸಂಗತಿ ಹಂಚಿಕೊಂಡಿದ್ದು, ಮಾನಸಿಕ ಆರೋಗ್ಯ ಮುಖ್ಯ ಮತ್ತು ಅದನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇಂಗ್ಲೇಂಡ್ ನ ಮಾಜಿ ಕ್ರಿಕೇಟಿಗ ಮಾರ್ಕ್ ನಿಕೋಲಸ್ ಅವರ ನಾಟ್ ಜಸ್ಟ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ 2014 ರಲ್ಲಿ ಇಂಗ್ಲೆಂಡ್ ಸರಣಿಯ ಸಂದರ್ಭದಲ್ಲಿ ನಾನು ಒಬ್ಬೊಂಟಿ ಎನ್ನಿಸಿತ್ತು ಎಂದಿದ್ದಾರೆ. ವಿಶ್ವದಲ್ಲೇ ನಾನು ಒಬ್ಬಂಟಿ ಎನ್ನಿಸಿತ್ತು. ಯಾರೊಂದಿಗೂ ಮಾತನಾಡುವುದು ಬೇಡ ಎನ್ನಿಸಿ ದೂರವಿಟ್ಟಿದ್ದೆ. ಸಂವಹನ ಮಾಡೋದು ಹೇಗೆ ಎಂಬುದೇ ಅರ್ಥವಾಗಿರಲಿಲ್ಲ.

ಎಲ್ಲ ಬ್ಯಾಟ್ಸ್ ಮನ್ಗಳು ಇಂತಹ ಒಂದು ದಿನವನ್ನು, ಸಮಯವನ್ನು ತಮ್ಮ ವೃತ್ತಿಬದುಕಿನಲ್ಲಿ ನೋಡಿರುತ್ತಾರೆ. ಮಾನಸಿಕ ಸಮಸ್ಯೆ ವೃತ್ತಿಪರ ಕ್ರಿಕೆಟಿಗನ ವೃತ್ತಿ ಬದುಕನ್ನೇ ನಾಶಪಡಿಸುವಷ್ಟು ಶಕ್ತಿಶಾಲಿಯಾಗಿರೋದರಿಂದ ಎಲ್ಲರೂ ತಜ್ಞರ ಸಲಹೆ ಪಡೆಯಬೇಕು ಎಂದಿದ್ದಾರೆ.

ನಾನು ರಾತ್ರಿಗಳನ್ನು ನಿದ್ದೆ ಇಲ್ಲದೇ ಕಳೆದಿದ್ದೆ.ಬೆಳಗ್ಗೆ ಎದ್ದೇಳಲು ಬೇಸರವಾಗುತ್ತಿತ್ತು. ನಾನು ಎಕ್ಸಪರ್ಟ್ಸ್ ಸಲಹೆ ಪಡೆದು ಇದರಿಂದ ಹೊರಬಂದೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕಂಗನಾ ರನಾವುತ್ ಕೂಡ ಡಿಫ್ರೆಶನ್ ಸಂಗತಿ ಹಂಚಿಕೊಂಡಿದ್ದರು.

2014 ರ ಇಂಗ್ಲೆಂಡ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕೊಹ್ಲಿ 10 ಇನ್ನಿಂಗ್ಸ್ ನಲ್ಲಿ 13.50 ಸರಾಸರಿಯಲ್ಲಿ ರನ್ ಗಳಿಸಿದ್ದರು. ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಕೊಹ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ರನ್ಗಳಿಸಿ ಫಾರಂಗೆ ಮರಳಿದ್ದರು.

Comments are closed.