ಅಂತರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧ ಮುಂದುವರಿಕೆ : ಮಾರ್ಚ್ 31ರ ವರೆಗೆ ಹಾರಾಡಲ್ಲ ವಿಮಾನ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ. ಮಾರ್ಚ್ 31 ರ ವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ಸರಕು ವಿಮಾನಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಫೆಬ್ರವರಿ 28ಕ್ಕೆ ಅಂತರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿರ್ಬಂಧ ಕೊನೆಯಾಗಬೇಕಿತ್ತು. ಆದರೆ, ಮಾರ್ಚ್ 31 ರವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತ ಮುಂದುವರಿಸಲಾಗಿದೆ. ಡೈರೆಕ್ಟರೇಟ್ ಜನರಲ್ ಅಫ್ ಸಿವಿಲ್ ಎವಿಯೇಷನ್ 2021 ರ ಮಾರ್ಚ್ 31 ರ ರಾತ್ರಿ 11.59 ರವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಿದೆ.

2020 ರ ಮಾರ್ಚ್ 23 ರಂದು ಕೊರೋನಾ ಸೋಂಕಿನ ಕಾರಣದಿಂದ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಂದೇ ಭಾರತ್ ಮಿಷನ್ ಅಡಿ ಕೆಲವು ವಿಮಾನಗಳ ಕಾರ್ಯಾಚರಣೆ ನಡೆಸಲಾಗಿತ್ತು.

Comments are closed.