ರಾಬರ್ಟ್ ಜೊತೆ ರಶ್ಮಿಕಾ…..! ಕೊಡಗಿನ ಸುಂದರಿ ಹಂಚಿಕೊಂಡ್ಲು ಸ್ಪೆಶಲ್ ಪೋಟೋ…!!

ಒಂದೆಡೆ‌ ಕೊಡಗಿನ‌ ಕಿತ್ತಳೆಯಂತಹ ಬೆಡಗಿ ರಶ್ಮಿಕಾ‌ ಬಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದರೇ, ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ರಿಲೀಸ್ ಹಾಗೂ ಪ್ರಮೋಶನ್ ಸಿದ್ಧತೆಯಲ್ಲಿದ್ದಾರೆ. ಇದರ ಮಧ್ಯೆಯೂ ರಶ್ಮಿಕಾ ಹಂಚಿಕೊಂಡ ಪೋಟೋ ವೊಂದು ಅಚ್ಚರಿ ಮೂಡಿಸಿದೆ.

ರಶ್ಮಿಕಾ ಮಂದಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಸೆಲ್ಪಿಯೊಂದನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಹೀಗಾಗಿ ದಚ್ಚು ಮತ್ತು ರಶ್ಮಿಕಾ ಹೊಸ ಚಿತ್ರಕ್ಕೆ ಒಂದಾಗ್ತಿದ್ದಾರೆ ಅಂತ ನೀವಂದುಕೊಂಡಿದ್ದರೇ ವಿಷ್ಯ ಅದಲ್ಲ.

ಬದಲಾಗಿ ರಶ್ಮಿಕಾ ಈ ಪೋಟೋದ ಮೂಲಕ ತಮ್ಮ ನೆನಪು ಹಂಚಿಕೊಂಡಿದ್ದಾರೆ. ಹೌದು ೨೦೧೯ ರ ಮಾರ್ಚ್ ೧ ರಂದು ರಶ್ಮಿಕಾ ಹಾಗೂ ದರ್ಶನ್ ನಟನೆಯ ಮೊದಲ‌ ಚಿತ್ರ ಯಜಮಾನ ರಿಲೀಸ್ ಆಗಿತ್ತು.

ಈ ನೆನಪನ್ನು ದರ್ಶನ್ ಜೊತೆಗಿನ ಪೋಟೋ ಹಂಚಿಕೊಳ್ಳೋ ಮೂಲಕ ರಶ್ಮಿಕಾ ಹಸಿರಾಗಿಸಿಕೊಂಡಿದ್ದಾರೆ. ಯಜಮಾನ ರಿಲೀಸ್ ಗೆ ಎರಡು ವರ್ಷವಾಗಿರೋದಿಕ್ಕೆ ಖುಷಿಯಿಂದ ರಶ್ಮಿಕಾ ಈ ಪೋಟೋ ಹಂಚಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮೊದಲ ಬಾರಿಗೆ ನಿರ್ದೇಶಿಸಿದ್ದ ಯಜಮಾನ ಚಿತ್ರಕ್ಕೆ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಬಂಡವಾಳ ಹೂಡಿದ್ದರು. ಅಷ್ಟೇ ಅಲ್ಲ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ಗೆ ರಶ್ಮಿಕಾ ನಾಯಕಿಯಾಗಿದ್ದರು.

ರಾಬರ್ಟ್ ರಿಲೀಸ್ ಹೊತ್ತಿನಲ್ಲಿ ರಶ್ಮಿಕಾ ಹಂಚಿಕೊಂಡಿರೋ ಈ ಪೋಟೋ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು ರಶ್ಮಿಕಾಗೂ ರಾಬರ್ಟ್ ಗೂ ಲಿಂಕ್ ಇದ್ಯಾ ಅಂತ ಅಭಿಮಾನಿಗಳು ಕೇಳ್ತಿದ್ದಾರೆ.

Comments are closed.