ಎಲ್ಲಾ ಆಸೆ ಕೈಬಿಟ್ಟ ಇಟಲಿ, ಆಕಾಶದತ್ತ ನೋಟ : ಎಚ್ಚರ…. ಭಾರತಕ್ಕೂ ಕಾದಿದೆ ಭಾರೀ ಅಪಾಯ !

0

ಬೆಂಗಳೂರು : ವಿಶ್ವದಲ್ಲಿ ಉನ್ನತ ವೈದ್ಯಕೀಯ ಸೌಲಭ್ಯ ಹೊಂದಿರುವ ಇಟಲಿ ತನ್ನ ನಿರ್ಲಕ್ಷ್ಯಕ್ಕೆ ದೇಶದ ಪ್ರಜೆಗಳನ್ನು ದಿನ ನಿತ್ಯ ಬಲಿಕೊಡುತ್ತಿದೆ. ನಿತ್ಯವೂ 500ಕ್ಕೂ ಅಧಿಕ ಮಂದಿ ಸಾವಿಗೆ ಶರಣಾಗುತ್ತಿದ್ದಾರೆ. ಇಟಲಿ ಮಾಡಿಕೊಂಡ ಸಣ್ಣ ಎಡವಟ್ಟು ಇಂದು ದೇಶದ ಜನರನ್ನೇ ಕೊರೊನಾಗೆ ಬಲಿಕೊಡುವ ಸ್ಥಿತಿಗೆ ಬಂದೊದಗಿದೆ. ಭಾರತೀಯರು ನಿರ್ಲಕ್ಷ್ಯ ವಹಿಸಿದ್ರೆ ಇಟಲಿಯ ಸ್ಥಿತಿ ನಮ್ಮಲ್ಲೂ ಬರೋದು ಭಾರೀ ದೂರವಿಲ್ಲ.

ಚೀನಾದಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆಯೇ ಇಟಲಿ ನಿರ್ಲಕ್ಷ್ಯವಹಿಸಿತ್ತು. ಹೀಗಾಗಿಯೇ ಇಟಲಿಯ ಸಾವಿನ ಮನೆಯಾಗಿ ಪರಿವರ್ತನೆ ಹೊಂದಿದೆ. ಮೂರು ದಿನಗಳಲ್ಲಿ 1,529 ಸಾವಿಗೆ ಶರಣಾಗಿದ್ರೆ, ಒಂದೇ ದಿನ 5,986 ಹೊಸ ಪ್ರಕರಣ ಪತ್ತೆಯಾಗಿದೆ. ಇಟಲಿಯ ಪ್ರಧಾನಿ ಕೊರೊನಾ ನಮ್ಮ ಕೈತಪ್ಪಿ ಹೋಗಿದೆ, ಭೂಮಿಯ ಮೇಲೆ ಮಾಡಲು ಸಾಧ್ಯವಿರುವ ಎಲ್ಲಾ ಪರಿಹಾರ ಮಾರ್ಗಗಳು ಕೊನೆಗೊಂಡಿದೆ. ಇನ್ನು ಆಕಾಶದತ್ತ ನಮ್ಮ ನೋಟ ಎಂದು ಹೇಳಿದ್ದಾರೆ.

ಭಾರತದಲ್ಲಿ ಹೆಚ್ಚು ಪ್ರಕರಣ ವರದಿಯಾಗಿಲ್ಲವೆಂದು ಇಟಲಿ, ಇರಾನ್ ತರಹ ನಿರ್ಲಕ್ಷ್ಯವಹಿಸುವುದು ಬೇಡ ಎಂದು ಸರಕಾರ ಪದೇ ಪದೇ ಹೇಳುತ್ತಿದೆ. ನಿರ್ಲಕ್ಷ್ಯವಹಿಸದೆ, ಕೊಂಕು ನುಡಿಯದೆ, ರಾಜಕೀಯ ಮಾಡದೆ ಸರಕಾರ, ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಮಹಾಮಾರಿಯನ್ನು ಹೊಡೆದು ಓಡಿಸೋಣಾ. ವಿದೇಶದಿಂದ ಆಗಮಿಸುವ ವ್ಯಕ್ತಿಗಳು ತಮ್ಮ ಪ್ರಭಾವ ಬಳಿಸಿ ತನ್ನ ರೋಗ ಮುಚ್ಚಿಟ್ಟು ದೇಶ ದ್ರೋಹದ ಕೆಲಸ ಮಾಡಬೇಡಿ ಎಂದು ಸರಕಾರಗಳು ಹೇಳುತ್ತಿವೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ.

ಮಾಧ್ಯಮಗಳು ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿವೆ ಎಂದು ಟೀಕೆ ಮಾಡಬೇಡಿ. ಇಟಲಿಯಲ್ಲಿ 2 ರಿಂಗಳ ಹಿಂದೆ ಮಾಧ್ಯಮಗಳು ಗಂಭೀರ ವರದಿ ಮಾಡಿದಾಗಲೂ ಟೀಕೆ, ಹಾಸ್ಯ ಮಾಡಿದ್ದರು. ಇಟಲಿಯ ಜನತೆ ಈಗ ಏನಾಗಿದೆ ಅನ್ನೋದನ್ನು ಇಟಲಿಯ ಜನತೆ ನೋವಿನಿಂದ ಹೇಳುತ್ತಾರೆ.

Leave A Reply

Your email address will not be published.