ಕೊರೊನಾ ಎಫೆಕ್ಟ್ : ದೇವರ ನಾಡಿಗೆ ದಿಗ್ಬಂಧನ

0

ಕೇರಳ : ದೇಶಾದ್ಯಂತ ಕೊರೋನಾ ರುದ್ರ ತಾಂಡವವಾಡುತ್ತಿದೆ. ಕೊರೋವಾ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಒಂದೇ ದಿನ 20ಕ್ಕೂ ಅಧಿಕ ಜನರಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡಿದೆ. 6 ಮಂದಿಯನ್ನು ಬಲಿ ಪಡೆದಿರೋ ಕೊರೊನಾ ದೇವರನಾಡು ಕೇರಳದಲ್ಲಿಯೂ ಅಟ್ಟಹಾಸವನ್ನು ಮೆರೆಯುತ್ತಿದೆ. ಹೀಗಾಗಿ ಕೇರಳದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಕೇರಳವೊಂದರಲ್ಲಿಯೇ 70ಕ್ಕೂ ಅಧಿಕ ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, 300 ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವ ಸಂದೇಹ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟೆಚ್ಚರವಹಿಸಲಾಗುತ್ತಿದ್ದು, ರಾಜ್ಯಕ್ಕೆ ಪ್ರವೇಶಿಸೋ ಎಲ್ಲಾ ರಸ್ತೆ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಕಾಸರಗೋಡಿನಲ್ಲಿ ಹೈ ಅಲರ್ಟ್
ಗಡಿ ಜಿಲ್ಲೆಯಾಗಿರೋ ಕಾಸರಗೋಡಿನಲ್ಲಿಯೂ ಕೂಡಾ 40ಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಕಾಸರಗೋಡು ಜಿಲ್ಲೆಗೆ ಸೇರುವ ಸಾರಡ್ಕ ಗೇಟ್, ಪಾಣಾಜೆ ರಸ್ತೆ, ಬಾಯಾರು ಪೆರುವಾಯಿ ರಸ್ತೆ , ತಲಪಾಡಿ ರಸ್ತೆಯನ್ನು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇನ್ನು ನಿಯಮವನ್ನು ಮೀರಿದರೆ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ಕೇರಳದ ತಮ್ಮ ಊರಿಗೆ ಬರುವ ಜನ ಸಂಖ್ಯೆ ಹೆಚ್ಚಾಗಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ ಪೊಲೀಸರು ಮಾತ್ರ ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿದ್ದಾರೆ

Leave A Reply

Your email address will not be published.