ಕೊರೋನಾ ಮಹಾಮಾರಿ ತಡೆಗೆ ಪ್ರಾರ್ಥಿಸಿ ಶ್ರೀಕ್ಷೇತ್ರ ಗಾಣಗಾಪುರದಲ್ಲಿ ವಿಶೇಷ ಪೂಜೆ…!!

ಕೊರೋನಾ ಅಬ್ಬರದ ನಡುವೆ ಜನರು ದೇವರ ಮೊರೆ ಹೋಗಿದ್ದು, ನಾಡಿನ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಕಲ್ಬುರ್ಗಿ ಜಿಲ್ಲೆಯ ಗಾಣಗಾಪುರದ ದತ್ತ ದೇಗುಲದಲ್ಲಿ ಕೊರೋನಾ ನಿರ್ಮೂಲನೆಗಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದಿವೆ.

ಕಳೆದ ಮೂರು ದಿನಗಳಿಂದ ರುದ್ರಪಾರಾಯಣ ಹಾಗೂ ಧಾರಾ ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದ್ದು, ದೇಗುಲದ 10 ಕ್ಕೂ ಹೆಚ್ಚು ಅರ್ಚಕರು ಕೊರೋನಾ ನಿಯಮಾವಳಿಗಳ ಅನುಸಾರ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಮೂರು ದಿನಗಳ ಕಾಲ ಸತತ ಧಾರಾ ರುದ್ರಾಭಿಷೇಕ ಆಯೋಜಿಸಲಾಗಿತ್ತು. ವಿಶ್ವಕ್ಕೆ ಅಂಟಿದ ಕೊರೋನಾ ಮಹಾಮಾರಿಯಿಂದ ಬಿಡುಗಡೆಗಾಗಿ ಪ್ರಾರ್ಥಿಸಿ ಪೂಜೆಗಳು ನಡೆದಿದ್ದು, ಕೊರೋನಾ ತೊಲಗಲಿ ಎಂಬ ಪ್ರಾರ್ಥನೆ ಸಲ್ಲಿಸಲಾಗಿದೆ.

https://kannada.newsnext.live/tamil-nadu-man-arrested-fined-eating-snake-claims-it-keeps-covid-at-bay-viral-video/amp/

ನಾಡಿನ ಪ್ರಮುಖ ಶಕ್ತಿ ಪೀಠವಾಗಿರುವ ಗಾಣಗಾಪುರದಲ್ಲಿ ಯಾವುದೇ ಸಂಕಷ್ಟದಲ್ಲೂ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿದರೇ ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.

https://kannada.newsnext.live/public-outcry-was-sparked-in-lakshwadweep-over-reforms-announced-by-new-administration-led-by-bjp-praful-patel-rak/amp/

ಮಾಜಿ ಸಿಎಂ ಹಾಗೂ ಹಾಲಿಸಿಎಂಗಳು ಸೇರಿದಂತೆ ಹಲವು ರಾಜಕೀಯ ನಾಯಕರು ಆಗಾಗ ಗಾಣಗಾಪುರಕ್ಕೆ ಭೇಟಿ ನೀಡಿ ಇಲ್ಲಿನ ನಿರ್ಗುಣ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತಾರೆ.

Comments are closed.