ಬಾಲಿವುಡ್ ಬ್ಯೂಟಿಗಳ ಕೋಲ್ಡ್ ವಾರ್…! ಮತ್ತೆ ದೀಪಿಕಾ ಕಾಲೆಳೆದ ಕಂಗನಾ ರಾಣಾವುತ್..!!

0

ಬಾಲಿವುಡ್ ಅಂಗಳದಲ್ಲಿ ಕೆಲದಿನಗಳಿಂದ ನಟಿ ಕಂಗನಾ ರಾಣಾವುತ್ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ದಿನದಿಂದ ಬಾಲಿವುಡ್ ಕಾಲಿ ಕಹಾನಿ ಬಿಚ್ಚಿಡುತ್ತ ಬಂದ ಕಂಗನಾ ಸಾಕಷ್ಟು ನಟಿಮಣಿಯರ ವಿರುದ್ಧವೂ ಕಿಡಿಕಾರಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಭಾರಿ ಬಾಲಿವುಡ್ ನ ಬಹುಬೇಡಿಕೆಯ ನಟಿ ಹಾಗೂ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೊಳಗಾದ ಡಿಪ್ಪಿ ಅಲಿಯಾಸ್ ದೀಪಿಕಾಗೆ ಟಾಂಗ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ವಿಶ್ವಮಾನಸಿಕ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ನಟಿ ಕಂಗನಾ, ಖಿನ್ನತೆಯ ಅಂಗಡಿ ನಡೆಸುವವರು ಎನ್ನುವ ಮೂಲಕ ದೀಪಿಕಾ ಕಾಲೆಳೆದಿದ್ದಾರೆ. ಮಾನಸಿಕ ಆರೋಗ್ಯ ಜಾಗೃತಿಗಾಗಿ ನಾವು ನಿರ್ಮಿಸಿದ ಚಿತ್ರವನ್ನು ಬಿಡುಗಡೆಗೆ ಮೊದಲೆ ಖಿನ್ನತೆಯ ಅಂಗಡಿ ಇಟ್ಟವರು ನ್ಯಾಯಾಲಯಕ್ಕೆ ಎಳೆದೊಯ್ದರು. ಹೀಗಾಗಿ ನಾವು ಬಿಡುಗಡೆಗೆ ಮುನ್ನವೇ ಟೈಟಲ್ ಬದಲಿಸಬೇಕಾಯ್ತು ಎಂದಿದ್ದಾರೆ.

ಮಾನಸಿಕ ಆರೋಗ್ಯದ  ನಾವು ನಿರ್ಮಿಸಿದ ಚಿತ್ರಕ್ಕೆ ಮೊದಲು ಮೆಂಟಲ್ ಹೈ ಕ್ಯಾ ಎಂದು ಶೀರ್ಷಿಕೆ ಇಟ್ಟಿದ್ದೇವು. ಆದರೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಕಾನೂನು ಹೋರಾಟಕ್ಕೆ ಮುಂದಾದರು. ಹೀಗಾಗಿ ಇದನ್ನು ಜಡ್ಜಮೆಂಟಲ್ ಹೈ ಕ್ಯಾ ಎಂದು ಬದಲಾಯಿಸಿದೇವು. ಮಾನಸಿಕ ಆರೋಗ್ಯದ ಬಗೆಗಿನ ಉತ್ತಮ ಚಿತ್ರ ಇದು ನೋಡಲು ಮರೆಯಬೇಡಿ ಎಂದು ಕಂಗನಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಕಂಗನಾ ಟ್ವೀಟ್ ಗೆ ದೀಪಿಕಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸಧ್ಯದ ಕುತೂಹಲವಾಗಿದ್ದು, ಡಿಫ್ರೆಶನ್ ಕಿ ದುಖಾನ್  ಎಂದ ಕಂಗನಾ ಟ್ವೀಟ್ ಗೆ ಸಾಕಷ್ಟು ಪರ ವಿರೋಧ ಕಮೆಂಟ್ ಗಳು ಬಂದಿದ್ದು, ಬಹುತೇಕರು ಕಂಗನಾ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕಂಗನಾ ಬಾಲಿವುಡ್ ಹಾಗೂ ದೀಪಿಕಾ ವಿರುದ್ಧದ ತಮ್ಮ ಟ್ವೀಟ್ ಸಮರ ಮುಂದುವರೆಸಿದ್ದಾರೆ.

Leave A Reply

Your email address will not be published.