ಆರ್ಡರ್ ಮಾಡಿದ್ದು ದುಬಾರಿ ಬೆಕ್ಕಿನಮರಿ…! ಮನೆಗೆ ಬಂದಿದ್ದು ಪುಟ್ಟ ಹುಲಿಮರಿ…! ಬೆಕ್ಕಿನಾಸೆಗೆ ಕಳೆದುಕೊಂಡಿದ್ದು 5 ಲಕ್ಷ..!!

0

ಫ್ರಾನ್ಸ್: ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿ ಡಿಲೇವರಿ ಬಂದಾಗ ಕಾಗದದ ಉಂಡೆ ಮಾತ್ರ ಇದ್ದು ಗ್ರಾಹಕ ಮೋಸ ಹೋದ ಘಟನೆಯನ್ನು ನೀವೆಲ್ಲ ನೋಡಿರ್ತಿರಾ. ಆದರೆ ಇಲ್ಲಿ ಮಾತ್ರ ಆನ್ ಲೈನ್ ವಸ್ತುವೊಂದನ್ನು ಆರ್ಡರ್ ಮಾಡಿದ್ದ ದಂಪತಿ ಅದರ ಡಿಲೆವರಿ ಬಂದಾಗ ಅಕ್ಷರಷಃ ಬೆಚ್ಚಬಿದ್ದು ಮೂರ್ಚೆ ಹೋಗಿದ್ದರು. ಯಾಕಂದ್ರೆ ಅವರು ಆನ್ ಲೈನ್ ಬೆಕ್ಕಿನ ಮರಿ ಆರ್ಡರ್ ಮಾಡಿದ್ದರೇ ಹುಲಿಮರಿ ನಾ ಡೆಲಿವರ್  ಮಾಡಿದ್ದರು.

ಬೆಕ್ಕಿನ ಮರಿ ಸಾಕೋ ಆಸೆಯಲ್ಲಿದ್ದ ಫ್ರಾನ್ಸ್ ನ ಲೇ ಹ್ಯಾವ್ರೆಯ ದಂಪತಿ ಆನ್ ಲೈನ್ ನಲ್ಲಿ ಬಂದ ಬೆಕ್ಕಿನ ಮಾರಾಟದ ಜಾಹೀರಾತು ನೋಡಿ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅವರು ಭಾರತೀಯ ಬೆಲೆಯಲ್ಲಿ ದುಬಾರಿ ಮೊತ್ತ ಅಂದ್ರೆ 5 ಲಕ್ಷದ 17 ಸಾವಿರದ 515 ರೂಪಾಯಿ ಪಾವತಿಸಿದ್ದರು.

ಬೆಕ್ಕಿನ ಮರಿ ಡೆಲಿವರಿಗಾಗಿ ಕಾಯ್ತಿದ್ದ ದಂಪತಿಗೆ ಆರ್ಡರ್ ಡೆಲಿವರಿ ಏನೋ ಆಯ್ತು ಆದರೆ ಬಾಕ್ಸ್ ತೆರೆದು ನೋಡಿದ ದಂಪತಿ ಕಂಗಾಲಾಗಿದ್ರು. ಕಾರಣ ಸವನ್ನಾ ಬೆಕ್ಕಿನ ಮರಿ ಇರಬೇಕಾದ ಜಾಗದಲ್ಲಿ ಮುದ್ದಾದ ಸುಮಾತ್ರನ್ ಹುಲಿಮರಿ ಆಟವಾಡಿಕೊಂಡಿತ್ತು.  

ಸವನ್ನಾ ಹೈಬ್ರೀಡ್ ತಳಿಯ ಬೆಕ್ಕಾಗಿದ್ದು, ನೋಡಲು ಹುಲಿಯಂತೆ ಕಂಡುಬರುತ್ತದೆ. ಇದು ಆಫ್ರಿಕನ್ ಮೂಲದ ಸರ್ವಲ್ ತಳಿಯ ಕ್ರಾಸ್ ಬೀಡ್ ಮರಿಯಾಗಿದ್ದು, ಇದನ್ನು ಸಾಕೋದು ಪ್ರತಿಷ್ಠೆಯ ಸಂಗತಿ. ಈಕಾರಣಕ್ಕಾಗಿಯೇ ದುಬಾರಿ ಬೆಲೆ ತೆತ್ತು ಆರ್ಡರ್ ಮಾಡಿದ್ದ ದಂಪತಿ ಹುಲಿಮರಿ ಕಂಡು ಹೆದರಿದ್ದರು.

ಸವನ್ನಾ ಬೆಕ್ಕಿನ ಮರಿ ಬದಲು ಬಂದ ಸುಮಾತ್ರನ್ ಹುಲಿ ಮರಿ ಯನ್ನು ಸಾಕುಪ್ರಾಣಿಯಂತೆ ಸಾಕೋದು ಹಾಗೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಾಗಿಸೋದು ಫ್ರಾನ್ಸ್ ನಲ್ಲಿ ಶಿಕ್ಷಾರ್ಹ ಅಪರಾಧ. ಹೀಗಾಗಿ ಬೆಕ್ಕು ಸಾಕೋ ಆಸೆಗೆ ಹೋದ ದಂಪತಿ ಶಿಕ್ಷೆಯ ಭೀತಿ ಎದುರಿಸುವಂತಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ದಂಪತಿ ಶಿಕ್ಷೆಯಿಂದ ಬಚಾವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ ಆನ್ ಲೈನ್ ಮಾರಾಟ ತಾಣ ಹಾಗೂ 9 ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave A Reply

Your email address will not be published.