ಬಿಗ್ ಬಾಸ್ ಸೀಸನ್ 8 ಕ್ಕೆ ದಿನಗಣನೆ….! ಫೆ.17 ರಿಂದ ಕ್ವಾರಂಟೈನ್ …!28 ರಿಂದ ಅಸಲಿ ಆಟ ಶುರು…!!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ದಿನಗಣನೆ ಆರಂಭಗೊಂಡಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ಕಲರ್ ಫುಲ್ ಆಟಕ್ಕೆ ವೇದಿಕೆ ಸಜ್ಜಾಗಿದ್ದು, ಈಗಾಗಲೇ ಕಿಚ್ಚ ಸುದೀಪ್ ಕಲರ್ ಫುಲ್ ಪ್ರೋಮೋ ಮನಸೆಳೆಯುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಗಾಗಿ ಕ್ವಾರಂಟೈನ್ ಗೂ ಸಿದ್ಧತೆ ನಡೆದಿದೆ.

ಬಿಗ್ ಬಾಸ್  ರಿಯಾಲಿಟಿ ಶೋಗೆ ದಿನಗಣನೆ ಆರಂಭವಾಗಿದೆ. ಒಂದಿಷ್ಟು ಸ್ಪರ್ಧಿಗಳು, ವಿಭಿನ್ನ ಆಟ, ಒಂಟಿಮನೆಯ ನೋಟಕ್ಕೆ ಸಿದ್ಧತೆ ನಡೆದಿರೋ ಬೆನ್ನಲ್ಲೇ ಶೋ ಗೆ ಕೊರೋನಾ ನಿಯಮ ಅನ್ವಯವಾಗೋ ಹಿನ್ನೆಲೆಯಲ್ಲಿ ಕ್ವಾರಂಟೈನ್ ಗೂ ಸಿದ್ಧತೆ ನಡೆದಿದೆ.

ಬಿಗ್ ಬಾಸ್ ಶೋದಲ್ಲಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಕ್ವಾರಂಟೈನ್ ನಿಯಮ ಕಡ್ಡಾಯವಾಗಿರೋದರಿಂದ ಫೆ.17 ರಿಂದಲೇ ಬಿಗ್ ಬಾಸ್ ಸ್ಪರ್ಧಿಗಳನ್ನು ಹೊಟೇಲ್ ಗಳಲ್ಲಿ ಕ್ವಾರಂಟೈನ್ ಮಾಡೋಕೆ ಖಾಸಗಿ ವಾಹಿನಿ ಸಿದ್ಧತೆ ನಡೆಸಿದೆ. ಫೆ.17 ರಿಂದ 27 ರ ವರೆಎ ಕ್ವಾರಂಟೈನ್ ಆಗಲಿರುವ ಅಭ್ಯರ್ಥಿಗಳು ಬಳಿಕ ಕೊರೋನಾ ಟೆಸ್ಟ್ ಗೆ ಒಳಗಾಗಿ ಬಿಗ್ ಬಾಸ್ ಮನೆ ಸೇರಲಿದ್ದಾರೆ.

ಫೆ.28 ರಂದು ಶೋ ಆರಂಭವಾಗಲಿದ್ದು, 29 ರಿಂದ ಅಸಲಿ ಆಟ ಶುರುವಾಗಲಿದೆ. ಇತ್ತೀಚಿಗಷ್ಟೇ ವಿಕ್ರಾಂತ್ ರೋಣ ಲೋಗೋ ಜರ್ನಿ ಲಾಂಚ್ ಮುಗಿಸಿರುವ ಸುದೀಪ್ ತಮ್ಮ ಸ್ಯಾಂಡಲ್ ವುಡ್ ಸಿನಿ ಜರ್ನಿಯ 25 ವರ್ಷದ ಸಂಭ್ರಮಾಚರಣೆ ಕೂಡ ಮುಗಿಸಿ ಬಿಗ್ ಬಾಸ್ ಹೋಸ್ಟಿಂಗ್ ಗೆ ಸಜ್ಜಾಗಿದ್ದಾರೆ.

ಅದ್ದೂರಿ ಸಮಾರಂಭದಲ್ಲಿ ಬಿಗ್ ಬಾಸ್ ಶೋ ಆರಂಭಿಸಲು ಸಿದ್ಧತೆ ನಡೆದಿದ್ದು, ಅವಧೂತ್ ವಿನಯ್ ಗುರೂಜಿ, ಬ್ರಹ್ಮಗಂಟು ಖ್ಯಾತಿಯ ಗೀತಾ ಭಟ್, ಅನಿರುದ್ಧ, ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ,ಗಾಯಕ ಹಾಗೂ ನಟ ಸುನೀಲ್. ಕಾಮಿಡಿ ಕಿಲಾಡಿಯ ನಯನ ಸೇರಿದಂತೆ ಹಲವರ ಹೆಸರು ಶೋ ಸ್ಪರ್ಧಿಗಳ ಹೆಸರಿನಲ್ಲಿ ಕೇಳಿಬಂದಿದ್ದು, ಶೋ ಆರಂಭವಾದ ಮೇಲಷ್ಟೇ ಖಚಿತವಾಗಲಿದೆ.  

Comments are closed.