ನನ್ನ ಸಿನಿಮಾ ನೋಡದಿದ್ದರೂ ಪರವಾಗಿಲ್ಲ…! ಅಣ್ಣನ ಸಿನಿಮಾ ನೋಡೋಕೆ ಮರಿಬೇಡಿ…! ಧ್ರುವ್ ಸರ್ಜಾ ಭಾವುಕ ನುಡಿ…!!

ಸ್ಯಾಂಡಲ್ ವುಡ್ ನ ಅಪರೂಪದ ಸಹೋದರರಂತಿದ್ದ ಧ್ರುವ್ ಸರ್ಜಾ ಹಾಗೂ ಚಿರು ಸರ್ಜಾ ಇನ್ನೆಂದೂ ಒಂದಾಗದಂತೆ ದೂರವಾಗಿದ್ದಾರೆ. ಅಚಾನಕ್ ಬಂದಪ್ಪಳಿಸಿದ ಸಾವು ಧ್ರುವ್ ಸರ್ಜಾನಿಂದ ಚಿರುವನ್ನು ಬೇರ್ಪಡಿಸಿದೆ. ಆದರೂ ಇಂದಿಗೂ ಅಣ್ಣನಿಗಾಗಿ ಮಿಡಿಯುತ್ತಲೇ ಇರೋ ಧ್ರುವ್ ತನ್ನ ಸಿನಿಮಾ ಆಡಿಯೋ ಲಾಂಚ್ ನಲ್ಲೂ ಅಣ್ಣನ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

ಮೂರೂವರೆ ವರ್ಷಗಳ ಕಾಲ ಶ್ರಮ ಹಾಕಿ ಸಿದ್ಧಪಡಿಸಲಾದ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಚಿತ್ರ ಪೊಗರು ರಿಲೀಸ್ ಗೆ ಸಿದ್ಧವಾಗಿದೆ. ಪ್ರೇಮಿಗಳ ದಿನಾಚರಣೆಯಂದು ದಾವಣಗೆರೆಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಆಡಿಯೋ ಲಾಂಚ್ ಮಾಡಲಾಗಿದೆ.

ಆದರೆ ತಮ್ಮ ಸಿನಿಮಾ ಆಡಿಯೋ ಲಾಂಚ್ ನಲ್ಲೂ ಅಣ್ಣನಿಗಾಗಿ ಕನವರಿಸಿದ ಧ್ರುವ್ ಸರ್ಜಾ ಅಭಿಮಾನಿಗಳಿಗೆ ಹೃದಯತುಂಬಿದ ರಿಕ್ವೆಸ್ಟ್ ಮಾಡಿದ್ದಾರೆ.

ಪೊಗರು ಸಿನಿಮಾದ ಆಡಿಯೋ ಲಾಂಚ್ ವೇಳೆ  ರಾಜಾಮಾರ್ತಾಂಡ್ ಸಿನಿಮಾದ ಆಡಿಯೋ ರಿಲೀಸ್ ಮಾಡಿದ  ಧ್ರುವ್ ಸರ್ಜಾ ನನ್ನ ಸಿನಿಮಾ ನೋಡದಿದ್ದರೂ ಪರವಾಗಿಲ್ಲ ಅಣ್ಣನ ಕೊನೆಯ ಸಿನಿಮಾ ಇದು ನೋಡಿ. ಅಣ್ಣನಿಗೆ ಆಶೀರ್ವಾದ ಮಾಡಿ ಎಂದಿದ್ದಾರೆ.

ಪೊಗರು ಸಿನಿಮಾ ಫೆ.19 ರಂದು ರಿಲೀಸ್ ಆಗಲಿದ್ದು, ತಮಿಳು,ತೆಲುಗು,ಕನ್ನಡದಲ್ಲಿ ರಿಲೀಸ್ ಆಗೋ ಚಿತ್ರದ ಪ್ರದರ್ಶನದ ಇಂಟರ್ವೆಲ್ ನಲ್ಲಿ  ಚಿರು ಅಭಿನಯದ ಕೊನೆ ಚಿತ್ರ ರಾಜಾಮಾರ್ತಾಂಡ್ ಟ್ರೇಲರ್ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ.

ಆಡಿಯೋ ಲಾಂಚ್ ನಲ್ಲಿ ಅಣ್ಣನ ಕುರಿತು ಮಾತನಾಡಿದ ಧ್ರುವ್ ಸರ್ಜಾ,ನನ್ನ ಎಲ್ಲ ಚಿತ್ರಗಳ ಮೊದಲ ವಿಮರ್ಶಕ ನನ್ನ ಅಣ್ಣ. ಚಿರು ಅಣ್ಣನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಣ್ಣನ ಕೊನೆ ಚಿತ್ರ ರಿಲೀಸ್ ಸಿದ್ಧವಾಗಿದೆ. ನೋಡಿ ಆಶೀರ್ವದಿಸಿ. ಅಣ್ಣನ ಮಗ ಜ್ಯೂನಿಯರ್ ಚಿರುಗೂ ನಿಮ್ಮ ಆಶೀರ್ವಾದವಿರಲಿ ಎಂದಿದ್ದಾರೆ.

ಚಿರು ಹಾಗೂ ಧ್ರುವ್ ಸರ್ಜಾ ಸ್ನೇಹಿತರಂತಿದ್ದು ಧ್ರುವ್ ಸಿನಿಮಾ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ಚಿರು ಸಲಹೆ ಸೂಚನೆ ನೀಡುತ್ತ ಬಂದಿದ್ದರು.

Comments are closed.